ಸರಿಯಾಗಿ ನೋಡು... ನಮ್ಮೆದುರು ನಿಂತಿರುವ ಶತ್ರುವಿನ ಅಹಂಕಾರ... ಅವನ ಕಣ್ಣು ಕಿತ್ತು ಬರುವಂತೆ ಬಾಣ ಬಿಡಬೇಕು... ಗುರಿ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ... ಈ ಫೋಟೋ ನೋಡಿದರೆ ಇಂಥ ಸಾಲುಗಳು ನೆನಪಾಗದಿರಲು ಸಾಧ್ಯವೆ? ಹೌದು, ಇದು ನಿರ್ದೇಶಕ ಎಸ್‌ ಎಸ್‌ ರಾಜಮೌಳಿಯ ಮ್ಯಾಜಿಕಲ್‌ ಹಿಟ್‌ ‘ಬಾಹುಬಲಿ' ಚಿತ್ರದ ಪಾರ್ಟ್‌-2ನ ಎರಡನೇ ಹೊಸ ಪೋಸ್ಟರ್‌. ಮೊದಲ ಭಾಗದಲ್ಲಿ ಕ್ಲೈಮ್ಯಾಕ್ಸ್‌ ವರೆಗೂ ಹೆಚ್ಚು ಕಮ್ಮಿ ಮುಖವನ್ನೇ ತೋರಿಸದ ಅಭಿನಯಿಸಿದ ದೇವಸೇನಾ ಪಾತ್ರ ಹೇಗಿರಬಹುದು? ಎನ್ನುವ ಕುತೂಹಲವನ್ನೂ ಸಹ ತಣಿಸುವ ಪೋಸ್ಟರ್‌ ಇದು. ಬಾಹುಬಲಿಯ ತಂದೆ ಅಮರೇಂದ್ರ ಬಾಹುಬಲಿ ಹಾಗೂ ದೇವಸೇನಾ ಅವರ ಯುದ್ಧ ಅಭ್ಯಾಸದಂತೆ ಕಾಣುವ ಈ ಪೋಸ್ಟರ್‌ ಅನ್ನು ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದ್ದಾರೆ ನಿರ್ದೇಶಕ ರಾಜಮೌಳಿ
ಸರಿಯಾಗಿ ನೋಡು... ನಮ್ಮೆದುರು ನಿಂತಿರುವ ಶತ್ರುವಿನ ಅಹಂಕಾರ... ಅವನ ಕಣ್ಣು ಕಿತ್ತು ಬರುವಂತೆ ಬಾಣ ಬಿಡಬೇಕು... ಗುರಿ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ... ಈ ಫೋಟೋ ನೋಡಿದರೆ ಇಂಥ ಸಾಲುಗಳು ನೆನಪಾಗದಿರಲು ಸಾಧ್ಯವೆ? ಹೌದು, ಇದು ನಿರ್ದೇಶಕ ಎಸ್ ಎಸ್ ರಾಜಮೌಳಿಯ ಮ್ಯಾಜಿಕಲ್ ಹಿಟ್ ‘ಬಾಹುಬಲಿ' ಚಿತ್ರದ ಪಾರ್ಟ್-2ನ ಎರಡನೇ ಹೊಸ ಪೋಸ್ಟರ್. ಮೊದಲ ಭಾಗದಲ್ಲಿ ಕ್ಲೈಮ್ಯಾಕ್ಸ್ ವರೆಗೂ ಹೆಚ್ಚು ಕಮ್ಮಿ ಮುಖವನ್ನೇ ತೋರಿಸದ ಅಭಿನಯಿಸಿದ ದೇವಸೇನಾ ಪಾತ್ರ ಹೇಗಿರಬಹುದು? ಎನ್ನುವ ಕುತೂಹಲವನ್ನೂ ಸಹ ತಣಿಸುವ ಪೋಸ್ಟರ್ ಇದು. ಬಾಹುಬಲಿಯ ತಂದೆ ಅಮರೇಂದ್ರ ಬಾಹುಬಲಿ ಹಾಗೂ ದೇವಸೇನಾ ಅವರ ಯುದ್ಧ ಅಭ್ಯಾಸದಂತೆ ಕಾಣುವ ಈ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದ್ದಾರೆ ನಿರ್ದೇಶಕ ರಾಜಮೌಳಿ.
ಶಸ್ತ್ರಭ್ಯಾಸಕ್ಕೂ ಶೃಂಗಾರದ ನೆರಳು ಸೋಕಬಹುದೇ? ಹಾಗೊಂದು ಅನುಮಾನ ಮೂಡಿಸುವಂತಿರುವ ಅನುಷ್ಕಾ ಶೆಟ್ಟಿಹಾಗೂ ಪ್ರಭಾಸ್ ಅವರ ಎಕ್ಸ್ಪ್ರೆಷನ್ಗೂ ಈ ಪೋಸ್ಟರ್ ಸಾಕ್ಷಿ. ಆದರೆ, ಮೊದಲ ಭಾಗದಲ್ಲಿ ತುಂಬಾ ಡಿ-ಗ್ಲಾಮರ್ ಆಗಿ ಕಾಣಿಸಿಕೊಂಡ ಅನುಷ್ಕಾ ಶೆಟ್ಟಿ‘ಬಾಹುಬಲಿ-2'ನಲ್ಲಿ ಪಕ್ಕಾ ಗ್ಲಾಮರ್ ರೋಲ್ ಇದೆ ಎನ್ನುವ ಗಟ್ಟಿನಂಬಿಕೆ ಮೂಡಿಸಸಲಾಗಿದೆ. ಬಹುಶಃ ಅಮರೇಂದ್ರ ಬಾಹುಬಲಿ ಜತೆ ಬ್ಯೂಟಿ ಕ್ವೀನ್ ಕಂ ವಾರಿಯರ್ನ ಲುಕ್ನಲ್ಲಿ ಅನುಷ್ಕಾ ಶೆಟ್ಟಿಅವರ ಪಾತ್ರ ಸಂಯೋಜನೆ ಮಾಡಲಾಗಿದೆಯಂತೆ.
