ಕಿರುತೆರೆ ಮೂಲಕ ಬಾಲಿವುಡ್‌ ಎಂಟ್ರಿ ಕೊಡಬೇಕೆಂದು ಮನಸ್ಸು ಮಾಡಿದ ನಟಿಗೆ ಜೀವನ ತಡೆದದ್ದು ಬ್ಯಾಡ್ ರಿಲೇಷನ್‌ಶಿಪ್. '2014 ರಿಂದ 2015 ವರೆಗೂ ಕೆಟ್ಟದನ್ನೇ ಅನುಭವಿಸಿದ್ದೀನಿ. ಆ ಸಮಯದಲ್ಲಿ ಹಣಕಾಸಿನ ತೊಂದರೆ ಹೆಚ್ಚಾಗಿತ್ತು. ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಸಿದು ಹೋಗಿದ್ದೆ. ಇದರಿಂದ ಹೊರಗೆ ಬರಲು ಸಹಾಯ ಮಾಡಿದ್ದು ಧ್ಯಾನ' ಎಂದು ಹಂಚಿಕೊಂಡಿದ್ದರು.

ಅಷ್ಟಕ್ಕೂ ಮೋನಾಳ ಸಂಬಂಧ ಇದ್ದದ್ದು ನಟನೊಂದಿಗೆ. ಆದರೆ ಅವರ ಹೆಸರು ಹಂಚಿಕೊಳ್ಳಲು ಇಷ್ಟಪಡದ ಮೋನಾ " ಇದರಿಂದ 5 ವರ್ಷಗಳ ಕಾಲ ಕಷ್ಟ ಪಟ್ಟಿದ್ದೇನೆ. ಕೆಲಸದ ಕಡೆ ಗಮನ ಕಡಿಮೆ ಆಗಿತ್ತು. ಕೆಲಸಗಳು ಕೈ ಬಿಟ್ಟವು. ಅದರಲ್ಲೂ ಆ ವ್ಯಕ್ತಿ ಹಾಗೂ ನಾನು ಒಂದೇ ಇಂಡಸ್ಟ್ರಿಯವರಾದ ಕಾರಣ ಹೆಣ್ಣಾಗಿ ನನಗೆ ತೊಂದರೆ ಹೆಚ್ಚಾಗಿತ್ತು" ಎಂದು ಮೋನಾ ಹೇಳಿದ್ದಾರೆ.

ಇದರಿಂದ ಹೊರಬರಲು ಬಹಳ ಕಷ್ಟಪಟ್ಟ ಮೋನಾ ನಾನು ಮತ್ತೊಮ್ಮೆ ಪ್ರೀತಿ ಮಾಡುವುದಿಲ್ಲ. ಗಂಡಸರ ಮೇಲೆ ನನಗೆ ನಂಬಿಕೆ ಹೋಗಿದೆ ಎಂದರು. ಸದ್ಯ ಮೋನಾ ಕಿರುತೆರೆ ಧಾರವಾಹಿ "ವಿಕ್ರಂ ಬೆಟ್ಟಾ ಕಿ ರಹಸ್ಯ ಗೀತಾ" ದಲ್ಲಿ ನಟಿಸುತ್ತಿದ್ದಾರೆ.