ಮೋದಿ ಗೆಲುವಿಗೆ ಬೆಂಬಲಿಗರಿಂದ ಸಂಭ್ರಮಾಚರಣೆ | ಫಿಲ್ಮ್‌ಮೇಕರ್ ಅನುರಾಗ್ ಕಶ್ಯಪ್‌ರಿಂದ ಮೋದಿಗೆ ದೂರು | ಮೋದಿ ಬೆಂಬಲಿಗನಿಂದ ಅನುರಾಗ್ ಮಗಳಿಗೆ ಬೆದರಿಕೆ? 

ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು ಪ್ರಧಾನಿ ಮೋದಿ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿದ್ದಾರೆ. ಎಲ್ಲಾ ಕಡೆ ಮೋದಿ ಬಗ್ಗೆ ಶ್ಲಾಘನೆ, ಅಭಿನಂದನೆಗಳ ಸುರಿಮಳೆಯೇ ಹರಿದು ಬರುತ್ತಿದೆ. ಏತನ್ಮಧ್ಯೆ ಫಿಲ್ಮ್ ಮೇಕರ್ ಅನುರಾಗ್ ಕಶ್ಯಪ್ ಮೋದಿಗೆ ವಿಶ್ ಮಾಡಿ ಜೊತೆಗೆ ಕಂಪ್ಲೇಟನ್ನು ಮಾಡಿದ್ದಾರೆ. 

ಮೋದಿ ಬೆಂಬಲಿಗರು ಎನ್ನುವವರು ಅನುರಾಗ್ ಕಶ್ಯಪ್ ಮಗಳಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದನ್ನು ಮೋದಿ ಗಮನಕ್ಕೆ ತಂದ ಅನುರಾಗ್, ಮೋದಿಜಿಯವರೇ, ನಿಮ್ಮ ಗೆಲುವಿಗೆ ಅಭಿನಂದನೆಗಳು. ನಿಮ್ಮ ಬೆಂಬಲಿಗರು ಎನ್ನುವವರು ನನ್ನ ಮಗಳಿಗೆ ಬೆದರಿಕೆ ಹಾಕಿದ್ದಾರೆ. ಇವರನ್ನು ಹೇಗೆ ಸಂಭಾಳಿಸುವುದು? ನೀವೇ ಹೇಳಿ ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

ಬೆಂಬಲಿಗ ಮಾಡಿರು ಟ್ವೀಟ್ ಸ್ಕ್ರೀನ್ ಶಾಟನ್ನು ಹಾಕಿದ್ದಾರೆ. ಇಲ್ಲಿ ಮಗಳ ಘನತೆಗೆ ಧಕ್ಕೆ ತರುವಂತಹ ಪದ ಬಳಸಿರುವುದನ್ನು ಗಮನಿಸಬಹುದು.