ನವದೆಹಲಿ : ನಟ  ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್ ಬಗ್ಗೆ ಇದೀಗ ಹೊಸ ಸುದ್ದಿಯೊಂದನ್ನು ಕೇಳಿ ಬಂದಿದೆ.  ಬಾಲಿವುಡ್ ಚಿತ್ರವೊಂದರಲ್ಲಿ ನಟಿಸುವ ಬಗ್ಗೆ ಮೀರಾ ಸುದ್ದಿಯಾಗಿದೆ. ಅಲ್ಲದೇ ಅವರು  ಸಿದ್ದಾರ್ಥ್ ಮಲ್ಹೋತ್ರಾ ಅವರೊಂದಿಗೆ ನಟಿಸುವ ಬಗ್ಗೆ ಮೀರಾ ರಜಪೂತ್ ಸೂಚನೆಯೊಂದನ್ನು ನೀಡಿದ್ದಾರೆ.

 ಸಂಜಯ್ ಲೀಲಾ ಬನ್ಸಾಲಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂದೂ ಕೂಡ ಹೇಳಲಾಗಿದೆ. ನೇಹಾ ದೂಪಿಯಾ ಅವರ ಟಾಕ್ ಶೋ ಒಂದರಲ್ಲಿ ಮೀರಾ ರಜಪೂತ್ ಬನ್ಸಾಲಿ ಒಂದಿಗೆ ಕಾರ್ಯ ನಿರ್ವಹಿಸುವ ತಮ್ಮ ಆಸೆಯನ್ನು ಹೇಳಿಕೊಂಡಿದ್ದರು.

ಅಲ್ಲದೇ ಇದೇ ಶೋ ನಲ್ಲಿ ಮೀರಾಗೆ ಸಿದ್ದಾರ್ಥ್ ಮಲ್ಹೋತ್ರಾ ಮೇಲೆ ಕ್ರಶ್ ಆಗಿದ್ದಾಗಿ ಶಾಹಿದ್ ಕಪೂರ್ ಬಾಯಿಬಿಟ್ಟಿದ್ದರು. ಇದೀಗ ಅವರ ಕನಸು ನನಸಾಗುತ್ತಿದೆ.