ಚಂದ್ರಶೇಖರ್ ಸ್ಮರಣಾರ್ಥ ಹೊಸ ಎಡಕಲ್ಲು ಗುಡ್ಡದ ಮೇಲೆ ತೆರೆ ಮೇಲೆ

entertainment | Tuesday, March 27th, 2018
Suvarna Web Desk
Highlights

ಇದು ನಮ್ಮ ಚಿತ್ರ ಹೌದು. ಆದರೆ, ಇದು ನಿಮಗೆ ಅರ್ಪಣೆ... - ಹೀಗೆ ಹೇಳುತ್ತಿರುವುದು ನಿರ್ಮಾಪಕ ಜೆಪಿ ಪ್ರಕಾಶ್ ಹಾಗೂ ನಿರ್ದೇಶಕ ವಿವಿನ್ ಸೂರ್ಯ. ಇವರಿಬ್ಬರು ನಿರ್ಮಿಸುತ್ತಿರುವ ಹೊಸ ಚಿತ್ರ ‘ಎಡಕಲ್ಲು ಗುಡ್ಡದ ಮೇಲೆ’. ಪುಟ್ಟಣ್ಣ  ಕಣಗಾಲರ ‘ಎಡಕಲ್ಲು...’ ಚಿತ್ರದಲ್ಲಿ ನಟಿಸಿ ಮುಂದೆ ಎಡಕಲ್ಲು ಗುಡ್ಡದ ಚಂದ್ರಶೇಖರ್ ಎಂದೇ  ಪ್ರಸಿದ್ಧಿಗೆ ಬಂದ ಚಂದ್ರಶೇಖರ್ ಅವರು ಈ ಹೊಸ ‘ಎಡಕಲ್ಲು...’ ಚಿತ್ರದ  ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ, ಸಿನಿಮಾ ತೆರೆಗೆ ಬರುವ ಮುನ್ನವೇ  ಅವರು ನಿಧನ ಹೊಂದಿರುವುದು ಎಲ್ಲರಿಗೂ ಗೊತ್ತಿದೆ.

ಬೆಂಗಳೂರು (ಮಾ. 27): ಇದು ನಮ್ಮ ಚಿತ್ರ ಹೌದು. ಆದರೆ, ಇದು ನಿಮಗೆ ಅರ್ಪಣೆ... - ಹೀಗೆ ಹೇಳುತ್ತಿರುವುದು ನಿರ್ಮಾಪಕ ಜೆಪಿ ಪ್ರಕಾಶ್ ಹಾಗೂ ನಿರ್ದೇಶಕ ವಿವಿನ್ ಸೂರ್ಯ. ಇವರಿಬ್ಬರು ನಿರ್ಮಿಸುತ್ತಿರುವ ಹೊಸ ಚಿತ್ರ ‘ಎಡಕಲ್ಲು ಗುಡ್ಡದ ಮೇಲೆ’. ಪುಟ್ಟಣ್ಣ  ಕಣಗಾಲರ ‘ಎಡಕಲ್ಲು...’ ಚಿತ್ರದಲ್ಲಿ ನಟಿಸಿ ಮುಂದೆ ಎಡಕಲ್ಲು ಗುಡ್ಡದ ಚಂದ್ರಶೇಖರ್ ಎಂದೇ  ಪ್ರಸಿದ್ಧಿಗೆ ಬಂದ ಚಂದ್ರಶೇಖರ್ ಅವರು ಈ ಹೊಸ ‘ಎಡಕಲ್ಲು...’ ಚಿತ್ರದ  ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ, ಸಿನಿಮಾ ತೆರೆಗೆ ಬರುವ ಮುನ್ನವೇ  ಅವರು ನಿಧನ ಹೊಂದಿರುವುದು ಎಲ್ಲರಿಗೂ ಗೊತ್ತಿದೆ.

ಈ ಕಾರಣಕ್ಕೆ ಚಿತ್ರತಂಡ  ತಮ್ಮ ಚಿತ್ರವನ್ನು ಚಂದ್ರಶೇಖರ್ ಅವರಿಗೆ ಅರ್ಪಿಸುತ್ತಿದೆ.  ತಮ್ಮಂತಹ ಹೊಸಬರ ಚಿತ್ರದಲ್ಲಿ ನಟಿಸುವ ಮೂಲಕ ಪ್ರೀತಿ ತೋರಿದ  ಚಂದ್ರಶೇಖರ್ ಅವರಿಗೆ ಚಿತ್ರತಂಡ ವಿಶೇಷವಾಗಿ ಶ್ರದ್ಧಾಂಜಲಿ ಸಲ್ಲಿಸುವುದಕ್ಕೆ
ಮುಂದಾಗಿದೆ. ನಿರ್ಮಾಪಕ ಜೆ ಪಿ ಪ್ರಕಾಶ್ ಚಿತ್ರವನ್ನು ಚಂದ್ರಶೇಖರ್ ಅವರಿಗೆ  ಅರ್ಪಿಸುತ್ತಿದ್ದಾರೆ. ಚಿತ್ರದ ಟೈಟಲ್ ಕಾರ್ಡ್ ಬರುವ ಮುನ್ನವೇ ಅವರ ಭಾವಚಿತ್ರವನ್ನು ಹಾಕುವ  ಜತೆಗೆ ‘ಇದು ನಾವು ಮಾಡಿರುವ ಚಿತ್ರ ಆಗಿರಬಹುದು. ಆದರೆ, ಇದು ನಿಮಗೆ ಸೇರಿದ ಸಿನಿಮಾ. ನೀವು  ನಮ್ಮನ್ನು ಬೌದ್ಧಿಕವಾಗಿ ಅಗಲಿದ್ದೀರಿ. ಆದರೆ, ಇಂಥ ಚಿತ್ರಗಳ ಮೂಲಕ ಸದಾ ಜೀವಂತವಾಗಿರುತ್ತೀರಿ’  ಎನ್ನುವ ಸಾಲುಗಳು ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ಭಾರತಿ ವಿಷ್ಣುವರ್ಧನ್, ಶ್ರೀನಾಥ್, ಸುಮಿತ್ರಾ,
ದತ್ತಣ್ಣ, ಮೂಗೂರು ಸುರೇಶ್, ಚಿದಾನಂದ್, ಭವ್ಯಶ್ರೀ ರೈ, ಜ್ಯೋತಿ ರೈ, ವೀಣಾ ಸುಂದರ್, ಉಷಾ  ಭಂಡಾರಿ, ಧರ್ಮೆಂದ್ರ, ಸ್ವಾತಿ ಶರ್ಮ, ಪ್ರಗತಿ ಚಿತ್ರದಲ್ಲಿ ನಟಿಸಿದ್ದಾರೆ.

Comments 0
Add Comment

    ಹೇಗಿದೆ ಇಂದು ತೆರೆಕಂಡ "ಅಬ್ಬೆ ತುಮಕೂರ ಸಿದ್ಧಿಪುರುಷ ವಿಶ್ವಾರಾಧ್ಯರು"?

    video | Friday, April 13th, 2018
    Suvarna Web Desk