100 ಅಡಿ ಎತ್ತರದಿಂದ ಹೆಲಿಕಾಪ್ಟರ್ನಿಂದ ಹಾರಿದ ಕಲಾವಿದರು ನೀರಿನಿಂದ ಮೇಲಕ್ಕೆ ಬಂದಿಲ್ಲ ಎನ್ನಲಾಗಿದ್ದು, ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಶೂಟಿಂಗ್ ವೇಳೆ ಈ ಅನಾಹುತ ನಡೆದಿದೆ ಎನ್ನಲಾಗಿದೆ.
ಬೆಂಗಳೂರು(ನ.07): ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ವೇಳೆ ಅವಘಡವೊಂದು ಸಂಭವಿಸಿದ್ದು, ಶೂಟಿಂಗ್ ವೇಳೆ ಕೆರೆಗೆ ಹಾರಿದ್ದ ಇಬ್ಬರು ಕಲಾವಿದರು ಕಣ್ಮರೆಯಾಗಿದ್ದಾರೆ.
100 ಅಡಿ ಎತ್ತರದಿಂದ ಹೆಲಿಕಾಪ್ಟರ್ನಿಂದ ಹಾರಿದ ಕಲಾವಿದರು ನೀರಿನಿಂದ ಮೇಲಕ್ಕೆ ಬಂದಿಲ್ಲ ಎನ್ನಲಾಗಿದ್ದು, ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಶೂಟಿಂಗ್ ವೇಳೆ ಈ ಅನಾಹುತ ನಡೆದಿದೆ ಎನ್ನಲಾಗಿದೆ.
ನಾಯಕ ನಟ ದುನಿಯಾ ವಿಜಯ್ ಜೊತೆ ಕೆರೆಗೆ ಹಾರಿದ್ದ ಉದಯ್, ಅನಿಲ್ ನಾಪತ್ತೆಯಾಗಿರುವ ಸಹ ಕಲಾವಿದರಾಗಿದ್ದಾರೆ. ಕೆರೆಗೆ ಬಿದ್ದ ನಟ ದುನಿಯಾ ವಿಜಿ ಈಜಿ ದಡ ಸೇರಿದ್ದಾರೆ ಆದರೆ ಸಹ ನಟರು ನಾಪತ್ತೆಯಾಗಿದ್ದಾರೆ.
ಇಬ್ಬರು ಕಲಾವಿದರಿಗಾಗಿ ಕೆರೆಯಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಮಾಸ್ತಿಗುಡಿ ಶೂಟಿಂಗ್ ಸ್ಥಳದಲ್ಲಿ ಆತಂಕ ಸ್ಥಿತಿ ನಿರ್ಮಾಣವಾಗಿದ್ದು, ನಿರ್ದೇಶಕ ರವಿ ಶ್ರೀವತ್ಸ ಮಾರ್ಗದರ್ಶನದಲ್ಲಿ ಶೂಟಿಂಗ್ ನಡೆಯುತ್ತಿತ್ತು ಎನ್ನಲಾಗಿದೆ.