ಸೋ.ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ ಅಂಕಲ್ ಡ್ಯಾನ್ಸ್..!

First Published 1, Jun 2018, 3:53 PM IST
Man's Govinda-Style Dance Is A Viral Hit
Highlights

ಪ್ರತಿಭೆಗೆ ವಯಸ್ಸು ಮತ್ತು ಅಂತಸ್ತಿನ ಹಂಗಿಲ್ಲ ಅನ್ನೊದಕ್ಕೆ ಈ ವಿಡಿಯೋ ಸಾಕ್ಷಿ. ಮದುವೆ ಸಮಾರಂಭವೊಂದರಲ್ಲಿ ಈ ಅಂಕಲ್ ಮಾಡಿದ ಡ್ಯಾನ್ಸ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಇಂಧೋರ್(ಜೂ.1): ಪ್ರತಿಭೆಗೆ ವಯಸ್ಸು ಮತ್ತು ಅಂತಸ್ತಿನ ಹಂಗಿಲ್ಲ ಅನ್ನೊದಕ್ಕೆ ಈ ವಿಡಿಯೋ ಸಾಕ್ಷಿ. ಮದುವೆ ಸಮಾರಂಭವೊಂದರಲ್ಲಿ ಈ ಅಂಕಲ್ ಮಾಡಿದ ಡ್ಯಾನ್ಸ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಮಧ್ಯಪ್ರದೇಶದ ವಿದಿಶಾದ ಕಾಲೇಜೊಂದರ ಪ್ರೊಫೆಸರ್ ಆಗಿರುವ ಸಂಜೀವ್ ಶ್ರೀವಾಸ್ತವ್ ಎಂಬುವರು ಸಂಬಂಧಿಕರ ಮದುವೆ ಸಮಾರಂಭದಲ್ಲಿ ಮಾಡಿದ ಬಾಲಿವುಡ್ ನಟ ಗೋವಿಂದ ಅವರ ಸ್ಟೈಲ್ ಡ್ಯಾನ್ಸ್  ಅಪಾರ ಮೆಚ್ಚುಗೆ ಗಳಿಸಿದೆ.

ಸಂಜೀವ್ ತಮ್ಮ ಪತ್ನಿಯೊಂದಿಗೆ ಸ್ಟೇಜ್ ಮೇಲೆ ಗೋವಿಂದ ನಟನೆಯ ಕುದಗರ್ಜ್ ಚಿತ್ರದ ಆಪ್ ಕೇ ಆ ಜಾನೆ ಸೇ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಗೌತಮ್ ತ್ರಿವೇದಿ ಎಂಬುವರು, ಈ ಡ್ಯಾನ್ಸ್ ಗೆ ಯುನೆಸ್ಕೋ ಮಾನ್ಯತೆ ಸಿಕ್ಕಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಇನ್ನು ಗೌತಮ್ ಶೇರ್ ಮಾಡಿರುವ ವಿಡಿಯೋಗೆ ಎಲ್ಲೆಡೆಯಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಸುಮಾರು 10 ಸಾವಿರ ಜನರು ಲೈಕ್ ಮಾಡಿದ್ದಾರೆ. ಕೆಲವರಂತೂ ಈ ಅಂಕಲ್ ಸ್ಟೆಪ್ಸ್ ಗೆ ಮಾರುಹೋಗಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

loader