ಖ್ಯಾತ ಮಲಯಾಳಂ ನಟಿ ಅರ್ಚನಾ ಕವಿ ಏರ್‌ಪೋರ್ಟ್‌ಗೆ ತೆರಳುತ್ತಿದ್ದ ದಾರಿಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು ಚೆಲಿಸುತ್ತಿದ್ದ ಕಾರಿನ ಮೇಲೆ ಸಿಮೆಂಟ್ ಕಲ್ಲೊಂದು ಬಿದ್ದು ಕಾರಿನ ಗಾಜು ಪುಡಿ ಪುಡಿಯಾಗಿದೆ.

ಅರ್ಚನಾ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ನಡೆದ ಘಟನೆ ಹಾಗೂ ಫೋಟೋ ಶೇರ್ ಮಾಡಿಕೊಂಡು 'ದೊಡ್ಡ ಅಘಾತದಿಂದ ಪಾರಾದೆವು. ಏರ್‌ಪೋರ್ಟ್‌ ಮಾರ್ಗದಲ್ಲಿ ಕಾರು ಚಲಿಸುತ್ತಿದ್ದು ಮೆಟ್ರೋ ಕಾಮಗಾರಿಯಿಂದ ಸಿಮೆಂಟ್ ಕಲ್ಲು ಬಿದ್ದು ಗಾಜಿನ್ನು ಪುಡಿ ಮಾಡಿದೆ. ಯಾರಿಗೂ ಇದರಿಂದ ತೊಂದರೆ ಆಗಿಲ್ಲ. ಆದರೆ ಇಂತಹದ್ದೊಂದು ಕೆಲಸ ಎಂದೂ ಆಗಬಾರದು. ನಾನು ಕೊಚ್ಚಿನ್ ಮೆಟ್ರೋ ಹಾಗೂ ಕೊಚ್ಚಿನ್ ಪೊಲೀಸ್ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಇದಕ್ಕೆ ಡ್ರೈವರ್‌ಗೆ ಪರಿಹಾರ ನೀಡಬೇಕು ' ಎಂದು ಬರೆದುಕೊಂಡಿದ್ದಾರೆ.

 

ಅರ್ಚನಾ ಟ್ವೀಟ್ ಮಾಡುತ್ತಿದ್ದಂತೆ ವೈರಲ್ ಆಗಿದ್ದು ತಕ್ಷಣವೇ ಮೆಟ್ರೋ ಅಧಿಕಾರಿಗಳು 'ಈ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಕಾರು ಚಾಲಕನನ್ನು ಸಂಪರ್ಕಿಸಲು ಪ್ರಯತ್ನ ಮಾಡುತ್ತಿದ್ದೇವೆ. ಈ ಪ್ರಾಜೆಕ್ಟ್ ಸುರಕ್ಷಿತವಾಗಿ ನಡೆಯುವಂತೆ ನೋಡಿಕೊಳ್ಳುತ್ತೇವೆ' ಎಂದು ಸ್ಪಂದಿಸಿದ್ದಾರೆ.