ಬೆಂಗಳೂರು (ನ. 13): ವಿಭಿನ್ನ ಕಥಾ ಹಂದರದ ಮೂಲಕ ಮನೆ ಮನೆಗಳನ್ನು ಗೆದ್ದಿರುವ ಟಿ ಎಮ್ ಸೀತಾರಾಮ್ ಅವರ ಧಾರಾವಾಗಿ ’ಮಗಳು ಜಾನಕಿ’ ಸಾಕಷ್ಟು ತಿರುವುಗಳನ್ನು ಪಡೆದು ಸಾಗುತ್ತಿದೆ. ಪ್ರೇಕ್ಷಕರಲ್ಲಿ ದಿನದಿಂದ ದಿನಕ್ಕೆ ಕುತೂಹಲ ಮೂಡಿಸಿದೆ.

ಬದಲಾದ ಸನ್ನಿವೇಶದಲ್ಲಿ ನಿರಂಜನ್ ಜೊತೆ ಮಗಳು ಜಾನಕಿ ಮದುವೆಯಾಗಿದೆ. ತನ್ನ ಗಂಡ ಐಎಎಸ್ ಅಧಿಕಾರಿಯಲ್ಲ ಎಂಬ ಸತ್ಯ ಜಾನಕಿಗೆ ಗೊತ್ತಾಗಿದೆ. ದಾಂಪತ್ಯ ಮುರಿದು ಬಿದ್ದಿದ್ದು ವಿಚ್ಛೇದನದವರೆಗೆ ಬಂದು ನಿಂತಿದೆ. ಮುಂದೇನಾಗುತ್ತದೆ ಎಂಬ ಕುತೂಹಲ ಸದ್ಯ ಪ್ರೇಕ್ಷಕರದ್ದು. 

ಮಗಳು ಜಾನಕಿ ಧಾರಾವಾಹಿಯ ಮೊದಲ ಸಂವಾದ ಕಾರ್ಯಕ್ರಮವನ್ನು  ನವೆಂಬರ್ 18 ರಂದು ದಾವಣಗೆರೆಯಲ್ಲಿ ಆಯೋಜಿಸಲಾಗಿದೆ. ಅಲ್ಲಿನ ಬಾಪೂಜಿ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ 10 ಕ್ಕೆ ಸಂವಾದ ಆರಂಭವಾಗಲಿದೆ. 
'ಕಲೆಕ್ಷನ್ಸ್ ಎಂ.ಜಿ.ಎಂ ಸ್ಕ್ವೇರ್ , ಎಂ.ಸಿ.ಸಿ ’ಬಿ’ ಬ್ಲಾಕ್ ದಾವಣಗೆರೆ ಮತ್ತು ಬಾಪೊಜಿ ಸಂಭಾಂಗಣದ ಮುಂಭಾಗ ಪಾಸ್ ಗಳು ದೊರೆಯಲಿದೆ.