’ದುನಿಯಾ’ ಮೂಲಕ ಮತ್ತೆ ತೆರೆಗೆ ಬರ್ತಾ ಇದ್ದಾರೆ ಲೂಸ್ ಮಾದ

Loose Mada Coming Screen Soon
Highlights

ಯೋಗೇಶ್ ಎಂಬ ಹೆಸರಿನ ಸಪೂರ ದೇಹದ ಹುಡುಗ ಬೆಳ್ಳಿತೆರೆಯಲ್ಲಿ ಲೂಸ್ ಮಾದ ಯೋಗಿ ಅಂತಲೇ ಸ್ಟಾರ್ ಆಗಿ ಮಿಂಚಿದ್ದು ‘ದುನಿಯಾ’ ಚಿತ್ರದ ಮೂಲಕ. ಅದು ಬಂದು ಹೋಗಿ ದಶಕ ಉರುಳಿದೆ. ಲೂಸ್ ಮಾದ ಯೋಗಿ 25 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಆದರೆ, ದುನಿಯಾ ಕೊಟ್ಟಂತಹ ಬ್ರೇಕ್ ಅವರಿಗೆ ಈ ತನಕ ಸಿಕ್ಕಿಲ್ಲ ಎನ್ನುವ ಮಾತುಗಳ ನಡುವೆ ಈಗ ‘ಯೋಗಿ ದುನಿಯಾ’ದೊಂದಿಗೆ
ಇದೇ ವಾರ ತೆರೆ ಮೇಲೆ ಬರುತ್ತಿದ್ದಾರೆ.  

ಬೆಂಗಳೂರು (ಮಾ. 23): ಯೋಗೇಶ್ ಎಂಬ ಹೆಸರಿನ ಸಪೂರ ದೇಹದ ಹುಡುಗ ಬೆಳ್ಳಿತೆರೆಯಲ್ಲಿ ಲೂಸ್ ಮಾದ ಯೋಗಿ ಅಂತಲೇ ಸ್ಟಾರ್ ಆಗಿ ಮಿಂಚಿದ್ದು ‘ದುನಿಯಾ’ ಚಿತ್ರದ ಮೂಲಕ. ಅದು ಬಂದು ಹೋಗಿ ದಶಕ ಉರುಳಿದೆ. ಲೂಸ್ ಮಾದ ಯೋಗಿ 25 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಆದರೆ, ದುನಿಯಾ ಕೊಟ್ಟಂತಹ ಬ್ರೇಕ್ ಅವರಿಗೆ ಈ ತನಕ ಸಿಕ್ಕಿಲ್ಲ ಎನ್ನುವ ಮಾತುಗಳ ನಡುವೆ ಈಗ ‘ಯೋಗಿ ದುನಿಯಾ’ದೊಂದಿಗೆ
ಇದೇ ವಾರ ತೆರೆ ಮೇಲೆ ಬರುತ್ತಿದ್ದಾರೆ.  

ದಶಕದ ನಂತರ ಮತ್ತೊಂದು ದುನಿಯಾ. ಮತ್ತದೇ ಯಾಕೆ ?
ಇದು ಶುರುವಾಗಿದ್ದು ತುಂಬಾ ಆಕಸ್ಮಿಕ. ದುನಿಯಾದ ಸೀಕ್ವೆಲ್ ಮಾಡ್ಬೇಕು ಅಂತ ಇದನ್ನ ಮಾಡಿದ್ದಲ್ಲ. ಅಸಲಿಗೆ ಅದನ್ನು ಸೀಕ್ವೆಲ್  ಮಾಡೋದಕ್ಕೆ ಆಗೋದಿಲ್ಲ. ಅಲ್ಲಿದ್ದ ಸಾಕಷ್ಟು ಪಾತ್ರಗಳು  ಕ್ಲೈಮ್ಯಾಕ್ಸ್‌ನಲ್ಲಿ ಸತ್ತು ಹೋದವು. ನಿರ್ದೇಶಕ ಹರಿ ಒಂದು  ಹೊಸ ಬಗೆಯ ಕತೆ ತಂದ್ರು. ನಮ್ಮ ತಂದೆಗೆ ಅದು ತುಂಬಾನೆ ಇಷ್ಟ ಆಯ್ತು. ಅದನ್ನು ದುನಿಯಾ ಹೆಸರಲ್ಲೇ ಮಾಡೋಣ ಅಂತ ಡಿಸೈಡ್ ಮಾಡಿದ್ರು. ಹಾಗಾಗಿ ಅದು ‘ದುನಿಯಾ 2’ ಅಂತ ಶುರುವಾಗಿತ್ತು ಅಷ್ಟೆ. ಈಗ ಅದು ಯೋಗಿ ದುನಿಯಾ ಹೆಸರಲ್ಲಿ  ಬರುತ್ತಿದೆ.

ನಿಮಗೂ ವೈಯಕ್ತಿಕ ಬದುಕಿಗೂ ಈ ಟೈಟಲ್‌ಗೂ  ಏನಾದ್ರೂ ಲಿಂಕ್ ಇದೆಯಾ?
ಖಂಡಿತವಾಗಿಯೂ ಇಲ್ಲ. ಅಂತಹ ಯಾವುದೇ ಎಲಿಮೆಂಟ್ಸ್  ಇಲ್ಲಿಲ್ಲ. ಇಷ್ಟಕ್ಕೂ ಒಂದು ಸಿನಿಮಾ ಅಥವಾ ಒಂದು ಟೈಟಲ್‌'ಗೆ ಪ್ರೇರಣೆ ಆಗುವಂತಹ ಸಾಧನೆ ನನ್ನದೇನು ಇಲ್ಲ. ಪರ್ಯಾಯ ಟೈಟಲ್ ಬೇಕಿತ್ತು. ಯೋಚಿಸುತ್ತಿದ್ದಾಗ ಕತೆಗೆ ತಕ್ಕಂತೆ ಯೋಗಿ ದುನಿಯಾ ಅನ್ನೋದೆ ಸೂಕ್ತ ಎನಿಸಿತು. ಹಾಗಾಗಿ ಬದಲಾಯಿಸಿಕೊಂಡೆವು.

ಹಾಗಾದ್ರೆ ‘ಯೋಗಿ ದುನಿಯಾ’ದ ವಿಶೇಷತೆ ಏನು?
ನಾವು ಇಲ್ಲಿ ಮೆಜೆಸ್ಟಿಕ್‌ನ ಕತ್ತಲ ಜಗತ್ತನ್ನು ಅನಾವರಣ ಮಾಡಲು ಹೊರಟಿದ್ದೇವೆ. ಒಂದೀಡಿ ರಾತ್ರಿ ಬಸ್ಸಿನ ಮೇಲೆ ಸುತ್ತುವ  ಸಾಹಸವದು. ಮೆಜೆಸ್ಟಿಕ್ ಅಂದಾಕ್ಷಣ ಜನರಿಗೆ ಬಸ್ಸು, ಗಿಜಿಗುಡುವ ಜನ ಸಂದಣಿ, ವ್ಯಾಪಾರದ ಭರಾಟೆ, ಇತ್ಯಾದಿಯೇ ತಲೆಯಲ್ಲಿ ಮೂಡುತ್ತೆ. ಅಲ್ಲೂ ಇನ್ನೊಂದು ಜಗತ್ತು ಇದೆ. ಅದೇನು ಅನ್ನೋದು ಈ ಚಿತ್ರದ ಸಸ್ಪೆನ್ಸ್.

ಅಂದ್ರೆ, ಇದುವರೆಗೂ ಕಾಣದ ಜಗತ್ತೊಂದು ಅಲ್ಲಿದೆ  ಅಂತನಾ ?
ಖಂಡಿತಾ ಹೌದು. ಸದ್ಯಕ್ಕೆ ಅದೇನು ಅನ್ನೋದನ್ನು ನಾನು  ಹೇಳಲಾರೆ. ಆ ಜಗತ್ತಿನ ಮೇಲೆಯೇ ಈ ಕತೆ ಹೆಚ್ಚು ಫೋಕಸ್ ಆಗುತ್ತೆ. ಉಳಿದಂತೆ ಒಂದಷ್ಟು ಕಾಮಿಡಿ, ಸೆಂಟಿಮೆಂಟ್, ರೊಮಾನ್ಸ್ ಜತೆಗೆ ಕಮರ್ಷಿಯಲ್ ಅಂಶಗಳು ಇವೆ. ಕ್ಯೂಟ್
ಲವ್‌ಸ್ಟೋರಿ ಈ ಚಿತ್ರದ ಹೈಲೆಟ್. ಜತೆಗೆ ರೌಡಿಸಂ ಅನ್ನೋದು ಕೂಡ ಇಲ್ಲಿದ್ದರೂ ಒದು ಐದ್ಹತ್ತು ನಿಮಿಷದಷ್ಟು ಕಾಲ ಮಾತ್ರ.

ಯೋಗಿಗೆ ಇದು ಮತ್ತೊಂದು ಬ್ರೇಕ್ ನೀಡುವ ಸಿನಿಮಾ ಅಂತ ನಿಮ್ಮ ತಂದೆ ಸಿದ್ದರಾಜು ಹೇಳ್ತಾರೆ...
ಗೊತ್ತಿಲ್ಲ. ಅವರು ಆ ರೀತಿ ಹೇಳಿದ್ದು ಸಿನಿಮಾದ ಕತೆ ಮೇಲಿನ  ನಂಬಿಕೆಯಿಂದ. ಆ ನಂಬಿಕೆ ನನಗೂ ಇದೆ.ಆದ್ರೆ ಬ್ರೇಕ್ ಅಥವಾ ಸಕ್ಸಸ್ ಅನ್ನೋದು ನಮ್ಮ ಕೈಯಲ್ಲಿ ಇಲ್ಲ. ಅದು ಪ್ರೇಕ್ಷಕರಿಗೆ ಬಿಟ್ಟಿದ್ದು. ಒಂದು ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಿ, ಅವರ ಮನಗೆದ್ದರೆ ನಾವು ಹಾಕಿದ ಶ್ರಮ ಸಾರ್ಥಕವಾದಂತೆ. ಆ ನಿಟ್ಟಿನಲ್ಲಿ ನಾನು ಪ್ರೇಕ್ಷಕರು ನೀಡುವ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇನೆ.

loader