ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮಾಸ್ತಿಗುಡಿ ಚಿತ್ರೀಕರಣದ ವೇಳೆ ನಡೆದ ದುರಂತ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಸುರಕ್ಷಾ ಕ್ರಮಗಳನ್ನು ಅನುಸರಿಸದೇ ಇದ್ದದ್ದು ದುರಂತಕ್ಕೆ ಕಾರಣವಾಗಿದೆ. ಆದ್ರೆ, ಈ ಹಿಂದೆ ಕೂಡಾ ಹಲವು ಚಿತ್ರಗಳಲ್ಲೂ ಇದೆ ರೀತಿಯ ಅವಘಡ ನಡೆದಿತ್ತು. ಈ ಬಗ್ಗೆ ಒಂದು ವರದಿ..
ಬೆಂಗಳೂರು(ನ.08): ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮಾಸ್ತಿಗುಡಿ ಚಿತ್ರೀಕರಣದ ವೇಳೆ ನಡೆದ ದುರಂತ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಸುರಕ್ಷಾ ಕ್ರಮಗಳನ್ನು ಅನುಸರಿಸದೇ ಇದ್ದದ್ದು ದುರಂತಕ್ಕೆ ಕಾರಣವಾಗಿದೆ. ಆದ್ರೆ, ಈ ಹಿಂದೆ ಕೂಡಾ ಹಲವು ಚಿತ್ರಗಳಲ್ಲೂ ಇದೆ ರೀತಿಯ ಅವಘಡ ನಡೆದಿತ್ತು. ಈ ಬಗ್ಗೆ ಒಂದು ವರದಿ..
ಮಲೆಯಾಳಂ ಚಿತ್ರ ‘ಕೊಲಿಲಾಕ್ಕಂ’ ಶೂಟಿಂಗ್ ವೇಳೆ ದುರಂತ: ದುರಂತದಲ್ಲಿ ಸೂಪರ್ ಸ್ಟಾರ್ ಜಯನ್ ಸಾವು
1980ರ ನವೆಂಬರ್ 16ರಂದು ಮಲೆಯಾಳಂ ಸೂಪರ್ಸ್ಟಾರ್ ಜಯನ್ರವರು ಚಿತ್ರೀಕರಣ ವೇಳೆ ಅಸುನೀಗಿದ್ದರು. ಪಿ.ಎನ್.ಸುಂದರಂ ನಿರ್ದೇಶನದ ಕೊಲಿಲಾಕ್ಕಂ ಚಿತ್ರವನ್ನು ಚೆನ್ನೈನ ಸಮೀಪ ಶೋಲವರಂ ಬಳಿ ಶೂಟಿಂಗ್ ಮಾಡಲಾಗಿತ್ತು. ಕ್ಲೈಮ್ಯಾಕ್ಸ್ ಹಂತದಲ್ಲಿ ಹೆಲಿಕಾಪ್ಟರ್ ಸ್ಟಂಟ್ ಶೂಟಿಂಗ್ ಮಾಡುತ್ತಿದ್ದಾಗ ಪೈಲೆಟ್ನ ತಪ್ಪಿನಿಂದಾಗಿ ದುರಂತ ಸಂಭವಿಸಿ ನಟ ಜಯನ್ ಸಾವನ್ನಪ್ಪಿದ್ದರು.
1982ರ ‘ಕೂಲಿ’ ಶೂಟಿಂಗ್ನಲ್ಲಿ ತಪ್ಪಿದ ಅನಾಹುತ:ಫೈಟಿಂಗ್ ಸೀನ್ನಲ್ಲಿ ಅಮಿತಾಬ್ ಬೆನ್ನು ಮೂಳೆಗೆ ಪೆಟ್ಟು
1982ರಲ್ಲಿ ಬೆಂಗಳೂರು ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಕೂಲಿ' ಚಿತ್ರದ ಶೂಟಿಂಗ್‌ವೇಳೆ ಅಮಿತಾಬ್ ಬಚ್ಚನ್‌ಮತ್ತು ಖಳನಟ ಪುನೀತ್‌ಇಸ್ಸಾರ ಹೊಡೆದಾಡುವ ದೃಶ್ಯ ಚಿತ್ರೀಕರಣ ನಡೆಸಲಾಗುತ್ತಿತ್ತು. ಖಳನಾಯಕ ಪುನೀತ್ ಇಸ್ಸಾರ್, ಬಿಗ್ ಬಿ ಹೊಟ್ಟೆಗೆ ಗುದ್ದಿದಾಗ ಟೇಬಲ್‌ಮೇಲೆ ಬೀಳಬೇಕಾದ ಅಮಿತಾಬ್‌ತಪ್ಪಿ ಟೇಬಲ್‌ನ ಮೂಲೆಗೆ ಬಿದ್ದರು. ಹೊಟ್ಟೆಗೆ ಏಟಾಗಿ ಕರುಳಿನ ಬಳಿ ರಕ್ತಸ್ರಾವ ಆರಂಭವಾಗಿ ಅವರ ಸ್ಥಿತಿ ಚಿಂತಾಜನಕವಾಗಿತ್ತು. ತಕ್ಷಣವೇ ಅವರನ್ನು ಬೆಂಗಳೂರು ಆಸ್ಪತ್ರೆಗೆ ದಾಖಲಿಸಿ ಬಳಿಕ ಮುಂಬೈಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
1994ರಲ್ಲಿ ‘ಲಾಕಪ್ ಡೆತ್’ ಶೂಟಿಂಗ್ ವೇಳೆ ಅವಘಡ:ಸ್ಟಂಟ್ ಕಲಾವಿದನಿಗೆ ಗಂಭೀರ ಗಾಯ
1994ರಲ್ಲಿ ಕನ್ನಡದ ಌಕ್ಷನ್ ಚಿತ್ರ ‘ಲಾಕಪ್ ಡೆತ್’ನಲ್ಲೂ ಅವಘಡ ಸಂಭವಿಸಿತ್ತು. ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ಚಿತ್ರೀಕರಣದ ವೇಳೆ ಪೊಲೀಸರು ಕಳ್ಳನನ್ನು ಹಿಡಿಯುವಾಗ ಅವರಿಂದ ತಪ್ಪಿಸಿಕೊಳ್ಳಲು ಸ್ಟಂಟ್ ಮ್ಯಾನ್ ಯತ್ನಿಸುವ ದೃಶ್ಯದ ಸೆರೆ ಹಿಡಿಯಲಾಗಿತ್ತು. ಕಳ್ಳನನ್ನು ಹಿಡಿಯುವಾಗ ಡಬಲ್ ಡೆಕ್ಕರ್ ಬಸ್ ಮೇಲೆ ಸ್ಟಂಟ್ ಮ್ಯಾನ್ ಜಿಗಿಯುವಾಗ ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ.. ಆದ್ರೆ ಸ್ಟಂಟ್ ಮ್ಯಾನ್ ಯಾರು? ಎಲ್ಲಿದ್ದಾನೆ? ಹೇಗಿದ್ದಾನೆ ಎಂಬುವುದರ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಇಲ್ಲ.
2000ರ ‘ಟಿಕೆಟ್ ಟಿಕೆಟ್ಸ್’ ಚಿತ್ರದಲ್ಲೂ ಅನಾಹುತ: ಚಿತ್ರೀಕರಣ ವೇಳೆ ಪೆಟ್ರೋಲ್ ಬಾಂಬ್ ಸ್ಫೋಟ, ಸಾವು
ಸಾಯಿಕುಮಾರ್ ಅಭಿನಯದ 2000ರಲ್ಲಿ ಬಿಡುಗಡೆಯಾದ ‘ಟಿಕೆಟ್ ಟಿಕೆಟ್ಸ್ ' ಚಿತ್ರದ ಶೂಟಿಂಗ್ ವೇಳೆ ಅನಾಹುತ ಸಂಭವಿಸಿತ್ತು. 1999ರಲ್ಲಿ ಸಾಹಸ ದೃಶ್ಯದ ವೇಳೆ ಪೆಟ್ರೋಲ್ ಬಾಂಬ್ ಸ್ಫೋಟಗೊಂಡಿತ್ತು. ದುರ್ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು ಘಟನೆ ಎಲ್ಲರಿಗೂ ಬೆಚ್ಚಿಬೀಳಿಸಿತ್ತು.
ಒಟ್ನಲ್ಲಿ ಮುನ್ನೆಚ್ಚರಿಕೆ ಇಲ್ದೇ ಯಾವುದೇ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ ಇಂತಹ ಅನಾಹುತವಾಗಿ ಪ್ರಾಣಪಕ್ಷಿ ಹಾರಿ ಹೋಗುವುದು ಅಚ್ಚರಿಯೇ ಸರಿ.
