ಲಾಲೂ ಪುತ್ರ ತೇಜ್ ಪ್ರತಾಪ್ ಬಾಲಿವುಡ್ ಎಂಟ್ರಿ!

Lalu Prasad Yadav’s son Tej Pratap Yadav to make his debut in Bollywood
Highlights

ಲಾಲೂ ಪುತ್ರ ತೇಜ್ ಪ್ರತಾಪ್ ಬಾಲಿವುಡ್ ಗೆ 

'ರುದ್ರ: ದಿ, ಅವತಾರ್' ಶೀಘ್ರದಲ್ಲೇ ತೆರೆಗೆ

ಟ್ವಿಟ್ಟರ್ ನಲ್ಲಿ ಫೋಟೋ ಹರಿಬಿಟ್ಟ ತೇಜ್
 

ಪಾಟ್ನಾ(ಜೂ27): ರಾಜಕೀಯದ ಜತೆಗೆ ಬಾಲಿವುಡ್‌ನಲ್ಲಿ ಮಿಂಚಲು ಆರ್ ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ರೆಡಿಯಾಗಿದ್ದಾರೆ.

ತೇಜ್ ಪ್ರತಾಪ್ ನಟಿಸುತ್ತಿರುವ ಚಿತ್ರಕ್ಕೆ 'ರುದ್ರ; ದಿ ಅವತಾರ್' ಎಂದು ಹೆಸರಿಡಲಾಗಿದೆ. 29 ವರ್ಷದ ಮಾಜಿ ಆರೋಗ್ಯ ಸಚಿವ ತೇಜ್ ಪ್ರತಾಪ್ ತಮ್ಮ ಚಿತ್ರದ ಪೋಸ್ಟರ್ ಅನ್ನು ಟ್ವಿಟರ್ ಖಾತೆಯಲ್ಲಿ ಬಿಡುಗಡೆ ಮಾಡಿದ್ದಾರೆ.

ತೇಜ್ ಪ್ರತಾಪ್ ಗೆ ಇದೇ ಮೊದಲ ಚಿತ್ರವಲ್ಲ. ಇದಕ್ಕೂ ಮುನ್ನ 2016ರಲ್ಲಿ ಬಿಡುಗಡೆಯಾದ ಭೋಜ್ ಪುರಿ 'ಅಪಹರಣ್ ಉದ್ಯೋಗ್' ಚಿತ್ರದಲ್ಲಿ ಬಿಹಾರದ ಸಿಎಂ ಆಗಿ ನಟಿಸಿದ್ದರು ಇನ್ನು ಟ್ವಿಟ್ಟರ್ ಖಾತೆಯಲ್ಲಿ ತೇಜ್ ಪ್ರತಾಪ್ ಹಾಕಿರುವ ಫೋಟೋಗೆ ನೆಟಿಜನ್ಸ್ ಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ತೇಜ್ ಪ್ರತಾಪ್ ಅವರಿಗೆ ಶುಭ ಕೋರಿದ್ದಾರೆ.

loader