Asianet Suvarna News Asianet Suvarna News

ಬಾಹುಬಲಿ ಪ್ರಭಾಸ್ 18 ಕೋಟಿಯಷ್ಟು ಜಾಹೀರಾತು ಒಪ್ಪಂದಗಳನ್ನ ತಿರಸ್ಕರಿಸಿದ್ಯಾಕೆ ಗೊತ್ತಾ?

ಹಲವು ಜಾಹೀರಾತು ಕಂಪನಿಗಳು ಪ್ರಭಾಸ್ ಜೊತೆ ಒಪ್ಪಂದಕ್ಕೆ ಮುಂದಾಗಿದ್ದವು. ಪ್ರಭಾಸ್ ಸುತಾರಾಂ ಒಪ್ಪಲಿಲ್ಲ. ಆ ಒಪ್ಪಂದಗಳಿಗೆ ಸಹಿ ಹಾಕಿದ್ದರೆ 18 ಕೋಟಿ ದುಡ್ಡು ಬಹಳ ಸುಲಭವಾಗಿ ಪ್ರಭಾಸ್ ಅಕೌಂಟ್'ಗೆ ಬಂದು ಬೀಳುತ್ತಿತ್ತು. "ಬಾಹುಬಲಿ"ಗೋಸ್ಕರ ಪ್ರಭಾಸ್ ಎಲ್ಲವನ್ನೂ ತಿರಸ್ಕರಿಸಿದರು. ಬಾಹುಬಲಿಯ ನಿರ್ದೇಶಕ ರಾಜಮೌಳಿಯವರೇ ಪ್ರಭಾಸ್'ರ ಬದ್ಧತೆ ಕಂಡು ಆವಾಕ್ಕಾಗಿದ್ದಾರೆ.

know why prabhas rejected brand endorsement projects
  • Facebook
  • Twitter
  • Whatsapp

ಹೈದರಾಬಾದ್(ಮೇ 13): ಬಾಹುಬಲಿ ಸಿನಿಮಾಗಳು ಬಂದ ನಂತರ ನಟ ಪ್ರಭಾಸ್, ರಾಣಾ ದಗ್ಗುಬಾಟಿ ಮೊದಲಾದವರು ದೇಶಾದ್ಯಂತ ಜನಪ್ರಿಯರಾಗಿದ್ದಾರೆ. ಟಾಲಿವುಡ್ ಸ್ಟಾರ್ ಪ್ರಭಾಸ್ ಅವರು ಬಾಹುಬಲಿಗಿಂತ ಮುನ್ನವೇ ದಕ್ಷಿಣ ಭಾರತದಲ್ಲಿ ಚಿರಪರಿಚಿತ ನಟರೆನಿಸಿದ್ದರು. ಬಾಹುಬಲಿ ನಂತರ ಅವರ ಜನಪ್ರಿಯತೆ ಉತ್ತುಂಗಕ್ಕೇರಿದೆ. ಪ್ರಭಾಸ್ ಅವರ ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಬದ್ಧತೆ ಎಂಥದ್ದು ಎಂಬುದು ಬಾಹುಬಲಿ ಸಿನಿಮಾದಿಂದ ನಿಜ್ಜಳವಾಗಿ ನಿರೂಪಿತವಾಗಿದೆ. ಬಾಹುಬಲಿ ಸಿನಿಮಾಗೆ ಮಾತ್ರವೇ ತಮ್ಮ ಗಮನ ಹರಿಸಲು ನಿರ್ಧರಿಸಿದ ಪ್ರಭಾಸ್, ಆ ಅವಧಿಯಲ್ಲಿ ಬೇರಾವುದೇ ಸಿನಿಮಾಗಳ ಶೂಟಿಂಗ್'ನಲ್ಲಿ ಪಾಲ್ಗೊಳ್ಳಲೇ ಇಲ್ಲ. ಸಾಲು ಸಾಲು ಹಿಟ್ ಚಿತ್ರಗಳಲ್ಲಿ ನಟಿಸಿದ ಪ್ರಭಾಸ್ ಅವರ ಡೇಟ್ ಪಡೆಯಲು ಪ್ರೊಡ್ಯೂಸರ್'ಗಳು ಕ್ಯೂನಲ್ಲಿ ನಿಂತಿದ್ದರು. ಆದರೂ ಪ್ರಭಾಸ್ ಅದ್ಯಾವುದನ್ನೂ ಒಪ್ಪಿಕೊಳ್ಳಲಿಲ್ಲ.

ಅಷ್ಟೇ ಅಲ್ಲ, ಹಲವು ಜಾಹೀರಾತು ಕಂಪನಿಗಳು ಪ್ರಭಾಸ್ ಜೊತೆ ಒಪ್ಪಂದಕ್ಕೆ ಮುಂದಾಗಿದ್ದವು. ಪ್ರಭಾಸ್ ಸುತಾರಾಂ ಒಪ್ಪಲಿಲ್ಲ. ಆ ಒಪ್ಪಂದಗಳಿಗೆ ಸಹಿ ಹಾಕಿದ್ದರೆ 18 ಕೋಟಿ ದುಡ್ಡು ಬಹಳ ಸುಲಭವಾಗಿ ಪ್ರಭಾಸ್ ಅಕೌಂಟ್'ಗೆ ಬಂದು ಬೀಳುತ್ತಿತ್ತು. "ಬಾಹುಬಲಿ"ಗೋಸ್ಕರ ಪ್ರಭಾಸ್ ಎಲ್ಲವನ್ನೂ ತಿರಸ್ಕರಿಸಿದರು. ಬಾಹುಬಲಿಯ ನಿರ್ದೇಶಕ ರಾಜಮೌಳಿಯವರೇ ಪ್ರಭಾಸ್'ರ ಬದ್ಧತೆ ಕಂಡು ಆವಾಕ್ಕಾಗಿದ್ದಾರೆ.

ಕಾಸೇ ಇಲ್ಲದಿದ್ದರೂ...
ಬಾಹುಬಲಿಯ ಎರಡು ಭಾಗದ ಸಿನಿಮಾಗಳ ನಿರ್ಮಾಣಕ್ಕೆ ತಗುಲಿದ ಸಮಯ ಹೆಚ್ಚೂಕಡಿಮೆ 5 ವರ್ಷ. ಇಷ್ಟೂ ಅವಧಿಯಲ್ಲಿ ಅವರ ಫೋಕಸ್ ಪೂರ್ಣವಾಗಿ ಬಾಹುಬಲಿಯತ್ತಲೇ ಇತ್ತು. ಬಾಹುಬಲಿಯಲ್ಲಿ ಅವರಿಗೆ ಸಿಕ್ಕ ಸಂಭಾವನೆ ಅಷ್ಟಕ್ಕಷ್ಟೇ. ತನಗೆ ಇನ್ನಿಲ್ಲದ ಡಿಮ್ಯಾಂಡ್ ಸೃಷ್ಟಿಯಾಗಿದ್ದರೂ ಪ್ರಭಾಸ್ ಎಂದಿಗೂ ಬಾಹುಬಲಿ ನಿರ್ಮಾಪಕರಲ್ಲಿ ದುಡ್ಡಿಗಾಗಿ ದುಂಬಾಲು ಬೀಳಲಿಲ್ಲ. ನಿರ್ಮಾಪಕರು ಎಷ್ಟು ಕೊಡುತ್ತಾರೋ ಅಷ್ಟನ್ನೇ ತೆಗೆದುಕೊಳ್ಳಿ ಎಂದು ತನ್ನ ಮ್ಯಾನೇಜರ್'ಗೆ ಪ್ರಭಾಸ್ ಬಹಳ ಸ್ಪಷ್ಟವಾಗಿ ಸೂಚನೆ ಕೊಟ್ಟಿದ್ದರಂತೆ. ಈ 5 ವರ್ಷದಲ್ಲಿ ಪ್ರಭಾಸ್'ಗೆ ಹಣವೇ ಇಲ್ಲದಂಥ ಸ್ಥಿತಿ ಇದ್ದ ನಿದರ್ಶನಗಳು ಹಲವು. ಅವರು ಸುಲಭವಾಗಿ ಬೇರೆ ಸಿನಿಮಾಗಳಲ್ಲಿ ನಟಿಸಿ ಹಣ ಗಳಿಸಬಹುದಿತ್ತು. ಪ್ರಭಾಸ್ ಹಾಗೆ ಮಾಡಲಿಲ್ಲ. ಪರಿಣಾಮ... ಸಿನಿಮಾದಲ್ಲಿ ಪ್ರಭಾಸ್ ಅವರು ಪ್ರೇಕ್ಷಕರ ಮನಸ್ಸಲ್ಲಿ ಬಹಳ ಗಟ್ಟಿಯಲ್ಲಿ ನಿಲ್ಲುತ್ತಾರೆ. ಬಾಲಿವುಡ್ ಅಷ್ಟೇ ಅಲ್ಲ, ಇಡೀ ವಿಶ್ವವೇ ಪ್ರಭಾಸ್ ಅವರನ್ನು ಮೆಚ್ಚಿಕೊಳ್ಳುವ ಸಂದರ್ಭ ಬಂದಿದೆ.

Follow Us:
Download App:
  • android
  • ios