ಕ್ರಿಕೆಟ್'ಗೆ ಉತ್ತೇಜನ ನೀಡಲು ಲಾರ್ಡ್ಸ್ ಮೈದಾನದಲ್ಲಿ ಪ್ರತೀ ವರ್ಷ ಕಾರ್ಪೊರೇಟ್ ಕ್ರಿಕೆಟ್ ಟೂರ್ನಿಯನ್ನು ಆಡಿಸಲಾಗುತ್ತದೆ. ಈ ವರ್ಷ ಅದು ಮೇ 11ಕ್ಕೆ ನಿಗದಿಯಾಗಿದೆ.
ಬೆಂಗಳೂರು: ಕಿಚ್ಚ ಸುದೀಪ್ ನಟನೆಯಷ್ಟೇ ಅಲ್ಲ, ಕ್ರಿಕೆಟ್'ನಲ್ಲೂ ಸೈ ಎನಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸೆಲಬ್ರಿಟಿ ಕ್ರಿಕೆಟ್ ಲೀಗ್ ಮತ್ತು ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್'ಮ್ಯಾನ್ ಆಗಿ ಕಿಚ್ಚ ಸುದೀಪ್ ಸಾಕಷ್ಟು ಗಮನ ಸೆಳೆದಿದ್ದಾರೆ. ಕ್ರಿಕೆಟ್ ಕಾಶಿ ಎಂದೇ ಕರೆಯಲಾಗುವ ಇಂಗ್ಲೆಂಡ್'ನ ಲಾರ್ಡ್ಸ್ ಗ್ರೌಂಡ್'ನಲ್ಲಿ ಕಿಚ್ಚ ಸುದೀಪ್ ಕ್ರಿಕೆಟ್ ಆಡಲಿದ್ದಾರೆ. ಮೇ 11 ರಂದು ಅಲ್ಲಿ ನಡೆಯಲಿರುವ ಕಾರ್ಪೊರೇಟ್ ಕ್ರಿಕೆಟ್ ಡೇ 2017 ಟೂರ್ನಿಯಲ್ಲಿ ಕಿಚ್ಚ ಸುದೀಪ್'ರನ್ನು ಆಡಲು ಆಹ್ವಾನಿಸಲಾಗಿದೆ. ಸ್ವತಃ ಸುದೀಪ್ ಅವರೇ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಏನಿದು ಕಾರ್ಪೊರೇಟ್ ಕ್ರಿಕೆಟ್?
ಕ್ರಿಕೆಟ್'ಗೆ ಉತ್ತೇಜನ ನೀಡಲು ಲಾರ್ಡ್ಸ್ ಮೈದಾನದಲ್ಲಿ ಪ್ರತೀ ವರ್ಷ ಕಾರ್ಪೊರೇಟ್ ಕ್ರಿಕೆಟ್ ಟೂರ್ನಿಯನ್ನು ಆಡಿಸಲಾಗುತ್ತದೆ. ಈ ವರ್ಷ ಅದು ಮೇ 11ಕ್ಕೆ ನಿಗದಿಯಾಗಿದೆ.
* ಪ್ರತಿಯೊಂದು ತಂಡದಲ್ಲೂ 9 ಆಟಗಾರರನ್ನು ಕಣಕ್ಕಿಳಿಸಬೇಕು.
* ಪ್ರತೀ ತಂಡದಲ್ಲೂ ಒಬ್ಬ ವೃತ್ತಿಪರ ಆಟಗಾರನನ್ನು ಆರಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ.
* ಪ್ರತೀ ತಂಡವೂ ಕನಿಷ್ಠ 3 ಪಂದ್ಯಗಳನ್ನು ಆಡುತ್ತದೆ.
* ಕೊನೆಯಲ್ಲಿ ಫೈನಲ್ ಪಂದ್ಯವಿರುತ್ತದೆ.
ಕಿಚ್ಚ ಸುದೀಪ್ ಅವರು ಯಾವ ತಂಡದಲ್ಲಿದ್ದಾರೆ? ಅವರ ತಂಡದಲ್ಲಿ ಯಾವ ವೃತ್ತಿಪರ ಆಟಗಾರರಿರುತ್ತಾರೆ ಎಂಬುದು ಇನ್ನೂ ಗೊತ್ತಾಗಿಲ್ಲ.
