ಬೆಂಗಳೂರು (ಆ.12):  ಒಂದೆಡೆ ಬಹು ನಿರೀಕ್ಷಿತ 'ಕುರುಕ್ಷೇತ್ರ' ಚಿತ್ರ ಬಿಡುಗಡೆಯಾಗಿದೆ.ಮತ್ತೊಂದೆಡೆ ಸ್ಯಾಂಡಲ್‌ವುಡ್‌ನ ಮತ್ತೊಂದು ಬಹು ನಿರೀಕ್ಷಿತ ಚಿತ್ರ 'ಪೈಲ್ವಾನ್' ಬಿಡುಗಡೆಗೆ ಸಿದ್ಧವಾಗಿದ್ದು, ಬಹು ಭಾಷೆಗಳಲ್ಲಿ ತೆರೆ ಕಾಣಲಿದೆ. ಈ ಮಧ್ಯೆಯೆ ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಸುದೀಪ್ ಹಾಗೂ ದರ್ಶನ್ ಟ್ರೆಂಡ್ ಆಗುತ್ತಿದ್ದಾರೆ. ಈ ನಟರಿಬ್ಬರು ಮಾಡುವ ಟ್ವೀಟ್ ಬಹಳ ಚರ್ಚೆಗೆ ಗ್ರಾಸವಾಗುತ್ತಿದೆ. 

ಆದರೆ, ಈ ಮಧ್ಯೆ ಕಿಚ್ಚ ಮಾಡಿದೊಂದು ಬಹು ಅರ್ಥವಿರುವ ಟ್ವೀಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 'ಗಂಡಸೆಂದು ಪ್ರೂವ್ ಮಾಡಲು ಆಲ್ಕೋಹಾಲ್ ಆಗಲಿ, ಸೂರ್ಯ ಮುಳುಗಲೆಂದು ಕಾಯುವ ಅಗತ್ಯವಿಲ್ಲ...' ಎಂಬರ್ಥ ಬರುವ ಟ್ವೀಟ್ ಮಾಡಿದ್ದು, ಒಂದೊಳ್ಳೆ ಸಾಲು ಓದಿದೆ ಎಂದು ಬರೆದು ಕೊಂಡಿದ್ದಾರೆ.

ಕೆನಡಾದಲ್ಲಿ ಕನ್ನಡದ ಅಬ್ಬರ! ಅಭಿಮಾನಿಗಳಿಗೆ ಸಿಕ್ತು ಕುರುಕ್ಷೇತ್ರ ದರ್ಶನ!

ಅಷ್ಟೇ ಅಲ್ಲ, 'ಯಾವುದೋ ಒಂದು ವಿಷಯವನ್ನು ಸಾಬೀತು ಮಾಡುವ ಉದ್ದೇಶದಿಂದ ನಾನು ಹೋರಾಡೋಲ್ಲ. ಆದರೆ, ವಿರೋಧಿಯೊಬ್ಬ ಹೋರಾಟಕ್ಕೆ ಅರ್ಹನೆಂದೆನಿಸಿದರೆ ಮಾತ್ರ ಅಖಾಡಕ್ಕೆ ಇಳಿಯುವೆ...' ಎಂಬ ಕೋಟ್ ಇರುವ ಫೋಟೋವನ್ನೂ ಟ್ವೀಟ್ ಮಾಡಿದ್ದಾರೆ.

 

ಡಿ-ಬಾಸ್‌ಗೆ Young ಫ್ಯಾನ್! ಚಿತ್ರಮಂದಿರ ಮುಂದೆ ಕುಣಿದ ಅಜ್ಜಿ ವೈರಲ್!

ಆ ಡೈಲಾಗ್ 'ಪೈಲ್ವಾನ್' ಚಿತ್ರದ್ದು ಎಂದೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಕಿಚ್ಚ ಟ್ವೀಟ್ ಕಾಕಷ್ಟು ಕುತೂಹಲ ಕೆರಳಿಸಿದ್ದಂತೂ ಸುಳ್ಳಲ್ಲ.

"