ಕಿಚ್ಚ ಸುದೀಪ್‌ಗೆ ನಾಳೆ ಹುಟ್ಟುಹಬ್ಬದ ಸಂಭ್ರಮ  | ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಸೆಲಬ್ರೇಟ್ ಮಾಡಲಿದ್ದಾರೆ ಸುದೀಪ್ | ಅಭಿಮಾನಿಯೊಬ್ಬರ ಬರ್ತಡೇ ಗಿಫ್ಟ್ ವೈರಲ್ 

ಬೆಂಗಳೂರು (ಸೆ. 01): ಸುದೀಪ್ ಸೆ.2 ರಂದು ಹುಟ್ಟುಹಬ್ಬ ಆಚರಿಸುತ್ತಿರುವ ಪ್ರಯುಕ್ತ ಸಂತಸಗೊಂಡಿರುವ ಸುದೀಪ್ ಅಭಿಮಾನಿ ಅಜಯ್‌ಕುಮಾರ್ ಸುದೀಪ್ ಅವರ ಒಂದು ಪೋಸ್ಟರ್ ಡಿಸೈನ್ ಮಾಡಿ ಸೋಷಲ್ ಮಾಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆ ಪೋಸ್ಟರ್ ಇದೀಗ ವೈರಲ್ ಆಗಿದೆ. ಸುದೀಪ್ ಇದುವರೆಗೆ ಪಡೆದಿರುವ ಪ್ರಶಸ್ತಿಗಳ ವಿವರಗಳನ್ನು ಒಳಗೊಂಡಿರುವ ಈ ಪೋಸ್ಟರ್ ಅನ್ನು ಕಿಚ್ಚನ ಅಭಿಮಾನಿಗಳೆಲ್ಲಾ ಹಂಚಿಕೊಳ್ಳುತ್ತಿದ್ದಾರೆ. 

Scroll to load tweet…