ರೈತರಿಗಾಗಿ ಇದ್ದ ಕಾರನ್ನು ಮಾರಿ, ಹೊಸ ಕಾರು ಕೊಂಡ ಕಿಚ್ಚ

Kiccha Sudeep bought new car
Highlights

ಸಿನಿಮಾ ಶೂಟಿಂಗ್ ಅನ್ನೋ ಕಿಚ್ಚನಿಗೆ ಆಕ್ಟಿಂಗ್ ಅಷ್ಟೆ ಅಲ್ಲದೆ ಕಾರ್ ಬೈಕ್ ಕ್ರೇಜ್ ಕೂಡ ಇದೇ. ನಾಲ್ಕು ವರ್ಷಗಳ ಬಳಿಕ ಕಿಚ್ಚ ಸುದೀಪ್ ಇತ್ತಿಚ್ಚಿಗೆ ಮತ್ತೊಂದು ಹೊಸ ಕಾರ್ ಖರೀಸಿದ್ದಾರೆ. ಹೇಗಿದೆ ನೋಡಿ.

ಕಿಚ್ಚ ನ ಹೊಸ ಕಾರಿನ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!

ವೊಲ್ವೊ ಎಕ್ಸಸಿ 90 ಟಿ8  ಸೀರಿಸ್ ರೆಡ್ ಕಾರವೊಂದನ್ನ ಸುದೀಪ್ ಇತ್ತಿಚಿಗೆ ಪರ್ಚೆಸ್ ಮಾಡಿದ್ದಾರೆ. ಇದರ ಬೇಲೆ ಕೇಳಿದ್ರ ನೀವು ಕಳೆದು ಹೋಗ್ತಿರಾ ಬಿಡಿ. ಹೌದು ಈ ಕಾರಿನ ಬೇಲೆ ಬರೋಬ್ಬರಿ 1 ಕೋಟಿ 16 ಲಕ್ಷ ರೂ. ಇದೆ. ಸದ್ಯ ಸುದೀಪ್ ಗೆ ರೆಡ್ ಕಲರ್ ಕಾರ್‌ಗಳಂದ್ರೆ ಪಂಚಪ್ರಾಣ, ಈಗಾಗ್ಲೇ ಸುದೀಪ್ ಅವರ ಹತ್ತಿರ ರೆಡ್ ಕಲರ್ ಜಾಗ್ವರ್ ಎಸ್​ಯೂವಿ ಸೇರಿದಂತೆ ಮೂರು ಕಾರುಗಳಿವೆ.

ಇದಿಗ ಮತ್ತೊಂದು ಹಾಟ್ ರೆಡ್ ಕಾರ್ ಖರಿದಿ ಮಾಡಿರೋ ಕಿಚ್ಚ, ರೆಡ್ ಕಲರ್ ಯಾವೂದೆ ಹೊಸ ಗಾಡಿ ಮಾರುಕಟ್ಟೆಗೆ ಬಂದ್ರೂ ಒಂದು ಟೆಸ್ಟ್ ಡ್ರೈವ್ ಮಾಡ್ತಾರೆ. ಅದರಲ್ಲಿ ಈಗಾಗ್ಲೆ ಎಕ್ಸ್5, ಎಂ50ಡಿ, ಬಿಎಂಡಬ್ಲ್ಯೂ ಎಕ್ಸ್ 6 ಕಾರು, ಮೊದಲಾದ ಐಷಾರಾಮಿ ಕಾರುಗಳ ಟೆಸ್ಟ್ ಡ್ರೈವ್ ಮಾಡಿ ಕಿಚ್ಚ ಖುಷಿ ಪಟ್ಟಿದ್ದಾರೆ. ಇನ್ನು ಬಿಗ್ ಬಾಸ್ ಶೋ ನಡೆಸಿಕೊಂಡುವ ಸಂದಂರ್ಭದಲ್ಲೂ ಕಿಚ್ಚ ಜಾಗ್ವಾರ್ ಎಕ್ಸ್ ಯುವಿ ಕಾರನ್ನ ಖರಿದಿಸಿದ್ರು. ಅದೂ ಕೆಂಪು ಬಣ್ಣದ್ದೆ ಅನ್ನೋದು ಇಂಟ್ರೆಸ್ಟಿಂಗ್.

ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಕಾರ್ ಕ್ರೇಜ್ ಹಾಗಾಗಿಯೇ ಕಿಚ್ಚನ ಹತ್ರ ಈಗಾಗ್ಲೆ ಜಾಗ್ವರ್ ಸಡನ್ ಎಕ್ಸ್ ಜೆ, ಲ್ಯಾಂಡ್ ಕ್ರೂಸರ್, ರೇಂಜ್ ರೂವರ್, BMW S6, ಪೋರ್ಡ್ ಕಂಪನಿ ಕಾರ್ ಜೊತೆಗೆ ಮೇಜರ್ ಎಡಿಷನ್ ಜೊತೆಗೆ ಅಲಟ್ರಾ ನಾಲ್ಕು ಕಾರುಗಳನ್ನು ಹೊಂದಿರೊ ಕಿಚ್ಚನ ಮನೆಯಲ್ಲಿ  9 ಕಾರು ಹಾಗೂ 2 ಲಕ್ಷೂರಿ ಬೈಕ್ ಗಳಿವೆ. ಇನ್ನು ಸುದೀಪ್ ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ಹೇಳೋದಾದ್ರೆ ಸುದೀಪ್‌ರ ಯಾವುದೇ ಫೋಟೋಸ್ ನೊಡಿ. ಕಾರು ಖರೀದಿ ಮಾಡುವಾಗ ಕಿಚ್ಚ ಟಿ ಶರ್ಟ್‌ಗಳನ್ನೇ ಹೆಚ್ಚಾಗಿ ಧರಿಸೋದು.ಅದರಲ್ಲೂ ರೆಡ್ ಕಲರ್ ಟಿ ಶರ್ಟ್ ಹೆಚ್ಚು ಹಾಕ್ತಾರೆ, ಕಾರ್ಯಕ್ರಮಕ್ಕೆ ತಕ್ಕಂತೆ ಡ್ರೆಸ್ ಮಾಡೋ ಕಿಚ್ಚ ಕಾರು ಬೈಕ್ ಖರಿದಿಯಲ್ಲಿರೋ ಟಿ ಶರ್ಟ್ ತೊಟ್ಟು ಯಂಗ್ ಆಂಡ್ ಎನರ್ಜಿಟಿಕ್ ಆಗಿಯೇ ಕಾಣ್ತಾರೆ. ಹೊಸ ಕಾರು ಖರೀದಿಸುವಾಗಲೂ ಕಿಚ್ಚ ಇದೇ ಗೆಟ್ ಅಪ್‌ನಲ್ಲಿದ್ದರು. 

ಈ ಹಿಂದೆ ಸುದಿಪ್ ಬಳಿ ಇದ್ದ ಕೆಂಬಣ್ಣದ ಕಲರ್ ಕಾರೊಂದನ್ನು ರೈತರಿಗಾಗಿ ಸಹಾಯ ಮಾಡಲೆಂದೇ ಮಾರಿದ್ದರು. ಆ ಮೂಲಕ ಅನ್ನದಾತನ ಕಷ್ಟಕ್ಕೂ ನೆರವಾಗುವ ದೊಡ್ಡ ಮನಸ್ಸುತಮ್ಮದೆಂದು ತೋರಿಸಿದ್ದರು.

ಕಿಚ್ಚನಿಗೆ ಗಾರ್ಡನ್ ಎಂದರೂ ಎಲ್ಲಿಲ್ಲದ ಪ್ರೀತಿ. ಮುದ್ದು ಮಡದಿಗೆ ಗಾರ್ಡನ್ ಏರಿಯಾ ವ್ಯವಸ್ಥೆ ಮಾಡಿದ ಕಿಚ್ಚ, ಈಗ ಅದೇ ಜಾಗಲ್ಲಿ ತಮ್ಮ 8-9 ಕಾರುಗಳನ್ನ ಪಾರ್ಕಿಂಗ್ ಮಾಡಿದ್ದಾರೆ. ಸಿನಿಮಾ ನಟನೆ ಟ್ರೆಂಡಿಂಗ್ ಆಗಿರೋ ಸುದೀಪ್‌ಗೆ ಕಾರ್ ಕ್ರೇಜ್ ಕೂಡ ಜೋರಿದೆ. ಹಾಗಾಗಿಯೇ ಮ್ತತೆ ಕಿಚ್ಚ ಹೊಸ ಕಾರು ಕೊಂಡಿದ್ದಾರೆ. ಅವರ ಆ್ಯಟಿಟ್ಯೂಡ್‌ಗೆ ಮ್ಯಾಚ್ ಆಗೋ ಕಲರ್. ರೆಬೆಲ್ ಅನ್ನೋದನ್ನೂ ಸೂಚಿಸುತ್ತೆ. ಹಾಗಾಗಿಯೇ ರೆಡ್ ಕಾರು ಖರೀದಿಸಿದ್ಧಾರೆ.

loader