ಕೆಜಿಎಫ್ ಚಿತ್ರದ ಸಾಂಗ್ ಮತ್ತೊಮ್ಮೆ ಸ್ಯಾಂಡಲ್‌ವುಡ್‌ನಲ್ಲಿ ಹವಾ ಎಬ್ಬಿಸಿದೆ. ಈಗಾಗಲೇ 'ಸಲಾಂ ರಾಕಿ ಭಾಯ್' ಹಾಡು 7.7 ಲಕ್ಷ ಮಂದಿ ಯು ಟ್ಯೂಬ್‌ನಲ್ಲಿ ವೀಕ್ಷಿಸಿದ್ದಾರೆ. ಅದೇ ಹಾದಿಯಲ್ಲಿ ಇದೀಗ ಅಮ್ಮನ ಹಾಡು ರೆಕಾರ್ಡ್ ಮುರಿಯುವ ಲಕ್ಷಣಗಳನ್ನು ತೋರಿಸುತ್ತಿದೆ.

ಡಿ.9ರಂದು ಲಹರಿ ಅಡಿಯೋದವರು 'ಗರ್ಭದಿ' ಎಂಬ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಯೂಟ್ಯೂಬ್‌ನಲ್ಲಿ 5.8 ಲಕ್ಷ ಮಂದಿ ವೀಕ್ಷಿಸಿ, ಟ್ರೆಂಡಿಂಗ್‌ನಲ್ಲಿ 5ನೇ ಸ್ಥಾನದಲ್ಲಿದೆ.

ಈ ಹಾಡಿನಲ್ಲಿ ಬಳಸಿರುವ ಪ್ರತಿಯೊಂದೂ ಸಾಲಿನ ನಂತರ ಬರುವ 'ಅಮ್ಮ' ಎಂಬ ಪದ ಜನರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಅದ್ಭುತ ಸಾಲುಗಳನ್ನು ಬರೆದಿರುವುದು ಪ್ರಶಾಂತ್ ನೇಲ್ ಹಾಗೂ ಗಾಯಕಿ ಅನನ್ಯಾ ಭಟ್ ಹಾಡಿನ ಭಾವಾರ್ಥವನ್ನು ಸುಶ್ರಾವ್ಯ ಗಾಯನದ ಮೂಲಕ ಹೆಚ್ಚಿಸಿದ್ದಾರೆ. ರವಿ ಬಸ್ರೂರ್ ಸಂಗೀತ ನಿರ್ದೇಶನದಲ್ಲಿ ಮೂಡಿರುವ 'ಕೆಜಿಎಫ್'ನ ಪ್ರತಿಯೊಂದೂ ಹಾಡೂ ಹಿಟ್ ಆಗೋದು ಗ್ಯಾರಂಟಿ.

ಬಹು ನಿರೀಕ್ಷಿತ 'ಕೆಜಿಎಫ್' ಚಿತ್ರದ ಪ್ರಮೋಷನ್‌ ರಾಕಿಂಗ್ ಸ್ಟಾರ್ ಯಶ್ ದೇಶದೆಲ್ಲೆಡೆ ಒಡಾಡುತ್ತಿದ್ದಾರೆ. ಡಿ.9ರಂದೇ ರಾಕಿಂಗ್ ಜೋಡಿ 2ನೇ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಂಡಿದ್ದು, ಅಂದೇ ರಾಧಿಕಾ ಹಾಗೂ ಲಿಟಲ್ ಏಂಜೆಲ್ ಮನೆಗೆ ಮರಳಿದ್ದಾರೆ. ಒಟ್ಟಿನಲ್ಲಿ ಡಿಸೆಂಬರ್‌ನಲ್ಲಿ ರಾಕಿಂಗ್ ಸ್ಟಾರ್‌ಗೆ ಲಕ್ ತರುವಂತೆ ಕಾಣುತ್ತಿದೆ.