ಶಾಸ್ತ್ರಿ'ಗೆ ಫಿಲ್ಮ್ ಚೆಂಬರ್'ನಿಂದ ನೆರವು

ಬೆಂಗಳೂರು(ಆ.19): ಲಿವರ್ ಕ್ಯಾನ್ಸರ್​ನಿಂದ ಬಳಲುತ್ತಿರುವ ಖ್ಯಾತ ಹಿನ್ನೆಲೆ ಗಾಯಕ ಎಲ್.ಎನ್. ಶಾಸ್ತ್ರಿ ಅವರಿಗೆ ಫಿಲ್ಮ್ ಚೆಂಬರ್ ನೆರವಿನ ಹಸ್ತ ನೀಡಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಕಾರ್ಯದರ್ಶಿ ಎಮ್.ಜಿ. ರಾಮಮುರ್ತಿ ಸೇರಿದಂತೆ ಹಲವರು ಎಲ್.ಎನ್. ಶಾಸ್ತ್ರಿ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ಅಲ್ಲದೆ ಫಿಲ್ಮ್ ಚೆಂಬರ್ ವತಿಯಿಂದ 50,000 ಸಹಾಯಧನ ನೀಡಲಾಯಿತು.