ಆನಂತರ ಒಂದೊಂದಾಗೇ ಹೆಸರು ಕೇಳಿ ಬಂತು ನೋಡಿ. ಆಗ ಬಾಲಿವುಡ್‌ ಅಚ್ಚರಿಗೊಳಗಾಗುತ್ತಾ ಹೋಯಿತು. ತಾರಾಗಣದಲ್ಲೆಲ್ಲಾ ದೊಡ್ಡ ದೊಡ್ಡ ಹೆಸರುಗಳೇ

ಕನ್ಫೆಷನ್ಸ್ ಆಫ್‌, ಥಗ್‌., ಇದು ಫಿಲಿಪ್‌ ಮೀಡೋಸ್‌ ಟೇಲರ್‌ ಬರೆದ 19ನೇ ಶತಮಾನದ ಬೆಸ್ಟ್‌ ಸೆಲ್ಲರ್‌ ಕಾದಂಬರಿ. 1839ರಲ್ಲಿ ಬಿಡುಗಡೆಯಾಗಿದ್ದ ಈ ಕಾದಂಬರಿ ಪ್ರಖ್ಯಾತ ಥಗ್‌ ಅಮಿರ್‌ ಅಲಿಯ ಕತೆಯನ್ನು ಹೊಂದಿದೆ. ಈ ಕೃತಿ ಅದು ಯಾವಾಗ ಅಮಿರ್‌ ಖಾನ್‌ ಕೈಗೆ ಸಿಕ್ಕಿತೋ ಅದೊಂದು ಸಿನಿಮಾ ಆಗುವ ಆಗುವ ಯೋಗವನ್ನು ಪಡೆಯಿತು. ‘ಥಗ್ಸ್‌ ಆಫ್‌ ಹಿಂದೂಸ್ತಾನ್‌' ಎಂಬ ಹೆಸರೂ ಫಿಕ್ಸ್‌ ಆಯಿತು.

 ಆನಂತರ ಒಂದೊಂದಾಗೇ ಹೆಸರು ಕೇಳಿ ಬಂತು ನೋಡಿ. ಆಗ ಬಾಲಿವುಡ್‌ ಅಚ್ಚರಿಗೊಳಗಾಗುತ್ತಾ ಹೋಯಿತು. ತಾರಾಗಣದಲ್ಲೆಲ್ಲಾ ದೊಡ್ಡ ದೊಡ್ಡ ಹೆಸರುಗಳೇ. ಹಾಗಾಗಿ ಈ ಸಿನಿಮಾದ ಹೀರೋಯಿನ್‌ ಯಾರಾಗುತ್ತಾರೆ ಅನ್ನೋ ಕುತೂಹಲ ಇತ್ತು. ಎಲ್ಲೆಡೆ ಕತ್ರಿನಾ ಹೆಸರು ಹರಿದಾಡುತ್ತಿತ್ತು. ವಿಜಯ್‌ ಕೃಷ್ಣ ಆಚಾರ್ಯ ನಿರ್ದೇಶಕರಾಗಿದ್ದುದು ಆ ಸುದ್ದಿಯನ್ನು ಪುಷ್ಟೀಕರಿಸಿತ್ತು. ಆದರೆ ಫಾತಿಮಾ ಸನಾ ಶೇಕ್‌ ಆಯ್ಕೆಯಾಗಿದ್ದಾರೆ ಎಂಬ ಸುದ್ದಿಯೊಂದಿಗೆ ಕತ್ರಿನಾ ಹೆಸರು ಸೈಡಿಗೆ ಬಿದ್ದಿದ್ದು. ಆದರೆ ಈಗ ಮತ್ತೆ ತಾರಾಗಣ ದೊಡ್ಡದಾಗಿದೆ. ಕತ್ರಿನಾ ನಮ್ಮ ದರೋಡೆಕೋರರ ತಂಡದ ಕಡೆಯ ಸದಸ್ಯೆ ಎಂದು ಅಮಿರ್‌ ಖಾನ್‌ ಟ್ವೀಟ್‌ ಮಾಡಿದ್ದಾರೆ. ಸೋ ದೊಡ್ಡ ಹಬ್ಬ ಖಾತ್ರಿ.