ಕರೀನಾ ಕಪೂರ್‌ ಮದುವೆಯಾಗಿ ಮಗುವಾದ ಮೇಲೆ ಮಾತು ಕಡಿಮೆ ಮಾಡಿದ್ದಾರೆ. ಆದರೆ ತೂಕವಾದ ಮಾತುಗಳನ್ನೇ ಆಡುತ್ತಾರೆ. ತನ್ನ ಲೈಫು, ತನ್ನ ಆಯ್ಕೆ, ತನ್ನ ವ್ಯಕ್ತಿತ್ವದ ಕುರಿತು ಅವರು ಹೇಳಿರುವ ಮಾತುಗಳು ಇಲ್ಲಿವೆ. ಈ ಮಾತುಗಳನ್ನು ತಮ್ಮ ಬದುಕುಗಳಿಗೂ ಅಳವಡಿಸಿಕೊಳ್ಳಬಹುದು.

- ನನ್ನ ಶಕ್ತಿ ನನಗೆ ಗೊತ್ತು. ಅದೇ ನನ್ನ ಶಕ್ತಿ. ಹಾಗಾಗಿ ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳಲಾರೆ. ಬೇರೆಯವರು ಏನು ಮಾಡುತ್ತಿದ್ದಾರೆ, ಯಾವ ಸಿನಿಮಾ ಆರಿಸಿಕೊಂಡಿದ್ದಾರೆ, ಯಾರ ಜೊತೆ ಕೆಲಸ ಮಾಡುತ್ತಾರೆ ಎಂದು ಯೋಚಿಸುವುದಿಲ್ಲ. ನಾನು ನನ್ನ ಲೈಫಿನ ಸ್ಟಾರ್‌. ನನ್ನ ಬದುಕನ್ನು ನಿರ್ಧರಿಸುವ ಆಯ್ಕೆಯನ್ನು ಬೇರೆಯವರಿಗೆ ನೀಡಲಾರೆ.

- ನನ್ನ ವೃತ್ತಿ ಬದುಕಿನಲ್ಲಿ ಮತ್ತು ವೈಯಕ್ತಿಕ ಬದುಕಿನಲ್ಲಿ ನಾನು ತೆಗೆದುಕೊಂಡ ನಿರ್ಧಾರಗಳ ಕುರಿತು ನನಗೆ ಹೆಮ್ಮೆ ಇದೆ. ಬೇರೆ ಯಾರನ್ನೋ ನೋಡಿ ನಾನು ಅವರಂತಾಗಬೇಕು ಎಂದು ಯಾವತ್ತೂ ಬಯಸಿಲ್ಲ. ನನ್ನನ್ನೇ ನಾನು ಉತ್ತಮಗೊಳಿಸಿಕೊಳ್ಳುವ ಯತ್ನದಲ್ಲಿ ಇರುತ್ತೇನೆ.

- ಬೇರೆಯವರು ನನ್ನ ಕುರಿತು ಏನು ಆಲೋಚಿಸುತ್ತಾರೆ, ಹೇಗೆ ಜಡ್ಜ್‌ ಮಾಡುತ್ತಾರೋ ಅಂತ ನಾನು ಯಾವತ್ತೂ ಯೋಚಿಸುವುದಿಲ್ಲ. ಕೆಲವೊಂದ್ಸಲ ನಮ್ಮ ಕಡೆಯಿಂದ ತಪ್ಪಾಗಬಹುದು, ಮತ್ತೊಮ್ಮೆ ಸರಿಯಾಗಬಹುದು. ಏನೇ ನಡೆದರೂ ಅವುಗಳಿಂದ ಪಾಠ ಕಲಿತು ಮುಂದೆ ಹೋಗಬೇಕು.