ಕರೀನಾ ಕಪೂರ್ ಎಂಬ ಲಕ್ಸ್ ಸಾಬೂನಿನ ಘಮದ ಹುಡುಗಿ ಝೀರೋ ಸೈಝ್ ಮೂಲಕ ಗಮನ ಸೆಳೆದಾಕೆ. ನೋಡುನೋಡುತ್ತಲೇ ಮದುವೆ, ತಾಯ್ತನದಲ್ಲಿ ಮುಳುಗಿದಾಕೆ ಪ್ರಕೃತಿ ಸಹಜವಾಗಿಯೇ ಗುಂಡಗಾದಳು. ಮೊನ್ನೆ ಮೊನ್ನೆ ‘ವೋಗ್’ ಎಂಬ ಫ್ಯಾಶನ್ ಮ್ಯಾಗಜಿನ್‌ಗೆ ಮಾಡಿದ ಫೋಟೋಶೂಟ್‌ನಲ್ಲಿ ಕರೀನಾ ಫಿಗರ್ ಕಂಡು ಬಾಲಿವುಡ್ ಬೆಚ್ಚಿಬಿದ್ದಿತು. ಮೊದಲಿನ ಝೀರೋಸೈಜ್ ನೆನಪಿಸುವಂತಿತ್ತು ಆಕೆಯ ಮೈಮಾಟ. ಗರ್ಭಿಣಿಯಾಗಿದ್ದಾಗ 20 ಕೆಜಿಗಳಷ್ಟು ತೂಕ ಏರಿಸಿಕೊಂಡಿದ್ದವಳು ಈಗ ಅಷ್ಟನ್ನೂ ಇಳಿಸಿಕೊಂಡಿರೋದು ವಿಶೇಷ. ಗರ್ಭಿಣಿ ಎಷ್ಟೇ ದಪ್ಪಗಾದ್ರೂ ಮತ್ತೆ ಸಣ್ಣಗಾಗಬಹುದು ಅನ್ನೋದು ಪ್ರೂವ್ ಆಯ್ತು!
ಬೆಂಗಳೂರು (ಜ.08): ಕರೀನಾ ಕಪೂರ್ ಎಂಬ ಲಕ್ಸ್ ಸಾಬೂನಿನ ಘಮದ ಹುಡುಗಿ ಝೀರೋ ಸೈಝ್ ಮೂಲಕ ಗಮನ ಸೆಳೆದಾಕೆ. ನೋಡುನೋಡುತ್ತಲೇ ಮದುವೆ, ತಾಯ್ತನದಲ್ಲಿ ಮುಳುಗಿದಾಕೆ ಪ್ರಕೃತಿ ಸಹಜವಾಗಿಯೇ ಗುಂಡಗಾದಳು. ಮೊನ್ನೆ ಮೊನ್ನೆ ‘ವೋಗ್’ ಎಂಬ ಫ್ಯಾಶನ್ ಮ್ಯಾಗಜಿನ್ಗೆ ಮಾಡಿದ ಫೋಟೋಶೂಟ್ನಲ್ಲಿ ಕರೀನಾ ಫಿಗರ್ ಕಂಡು ಬಾಲಿವುಡ್ ಬೆಚ್ಚಿಬಿದ್ದಿತು. ಮೊದಲಿನ ಝೀರೋಸೈಜ್ ನೆನಪಿಸುವಂತಿತ್ತು ಆಕೆಯ ಮೈಮಾಟ. ಗರ್ಭಿಣಿಯಾಗಿದ್ದಾಗ 20 ಕೆಜಿಗಳಷ್ಟು ತೂಕ ಏರಿಸಿಕೊಂಡಿದ್ದವಳು ಈಗ ಅಷ್ಟನ್ನೂ ಇಳಿಸಿಕೊಂಡಿರೋದು ವಿಶೇಷ. ಗರ್ಭಿಣಿ ಎಷ್ಟೇ ದಪ್ಪಗಾದ್ರೂ ಮತ್ತೆ ಸಣ್ಣಗಾಗಬಹುದು ಅನ್ನೋದು ಪ್ರೂವ್ ಆಯ್ತು!
ಮಗ ಹುಟ್ಟಿದ ಎರಡು ತಿಂಗಳಿಗೆಲ್ಲ ಸರಳ ಎಕ್ಸರ್ ಸೈಸ್ ಶುರುಮಾಡಿದ್ದೆ. ನಂತರ ಕಾರ್ಡಿಯೋ ವ್ಯಾಯಾಮ, ಆಮೇಲೆ ಯೋಗ, ನಂತರ ಪಿಲಾಟೇಸ್.. ಹೀಗೆ ಹಂತಹಂತವಾಗಿ ವ್ಯಾಯಾಮ ಹಾಗೂ ಆಹಾರಕ್ರಮದಲ್ಲಿ ಬದಲಾವಣೆ ಮಾಡಿದೆ.
-ಕರೀನಾ ಕಪೂರ್, ನಟಿ
ವರ್ಕೌಟ್ ಹೇಗಿರುತ್ತೆ?
ಪ್ರತಿದಿನ ಯೋಗ ಮಾಡ್ತಾರೆ. 50 ರಿಂದ 60 ರಷ್ಟು ಸೂರ್ಯ ನಮಸ್ಕಾರ ಮಾಡ್ತಾರೆ. ವಾರಕ್ಕೆ 3 ಗಂಟೆ ಎಕ್ಸರ್'ಸೈಸ್ ಹಾಗೂ ಪ್ರತಿದಿನ ವಾಕಿಂಗ್ ಕಡ್ಡಾಯ.
ಏನು ಡಯೆಟ್ ಮಾಡ್ತಾರೆ?
ಮನೆಯಡುಗೆಯನ್ನೇ ತಿನ್ನುತ್ತಾರೆ. ಬೆಳಗ್ಗೆ ಬಾಳೆಹಣ್ಣು ಮತ್ತು ನೆನೆಸಿದ ಬಾದಾಮಿ ತಿನ್ನುತ್ತಾರೆ. ಮಧ್ಯಾಹ್ನ ಹಾಗೂ ರಾತ್ರಿ ದಾಲ್ ಖಿಚ್ರೀ ಊಟ. ಅನ್ನ, ತುಪ್ಪ, ಬೆಲ್ಲ, ಬಾಳೆಹಣ್ಣನ್ನು ತಿಂತಾರೆ. ಕ್ಯಾಲ್ಶಿಯಂ ಪ್ರಮಾಣ ಹೆಚ್ಚಲು ಪ್ರತೀದಿನ ರಾತ್ರಿ ಹಾಲು ಕುಡೀತಾರೆ. ಎಳ್ಳುಂಡೆ ತಿನ್ನೋ ಖಯಾಲಿ ಇದೆ. ಜೀರ್ಣಶಕ್ತಿಗೆ ಒಳ್ಳೆಯದು ಅಂತ ದಿನಾ ಮಜ್ಜಿಗೆ ಕುಡೀತಾರೆ. ನಿತ್ಯ ಪಿಲಾಟೆಸ್ ತಪ್ಪಿಸಲ್ಲ.
