ತನ್ನ ಸೌಂದರ್ಯದ ಗುಟ್ಟು ಬಿಚ್ಚಿಟ್ಟ ಕರೀನಾ

Kareena Beauty Secret
Highlights

ಕರೀನಾ ಕಪೂರ್ ಬಾಲಿವುಡ್‌ನಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟು ಅಪಾರ ಅಭಿಮಾನಿಗಳ ಮನದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಕಮರ್ಷಿಯಲ್ ಇರಲಿ, ಕ್ಲಾಸಿಕಲ್ ಇರಲಿ ಪಾತ್ರಕ್ಕೆ ನ್ಯಾಯ ಒದಗಿಸುವುದು ಈ ಬೆಡಗಿಯ ವಿಶೇಷತೆಯಾದ್ದರಿಂದ ಇಂದಿಗೂ ಸಾಕಷ್ಟು ಬೇಡಿಕೆ ಇದ್ದೇ ಇದೆ. ಈಗ ಕರೀನಾ ತಮ್ಮ ಯಶಸ್ಸಿನ, ಸೌಂದರ್ಯದ ಗುಟ್ಟು ಬಿಚ್ಚಿಟ್ಟಿದ್ದಾರೆ. 

‘ಮೊದಲಿಗೆ ನನ್ನನ್ನು, ನನ್ನ ಸೌಂದರ್ಯವನ್ನು ನಾನು ಇಷ್ಟಪಡುತ್ತೇನೆ. ಆಗ ನನ್ನಲ್ಲೆ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಹೀಗಾಗಿಯೇ ನಾನು ಸುಂದರವಾಗಿ ಕಾಣುತ್ತೇನೆ ಮತ್ತು ನಟನೆಯಲ್ಲೂ ಗೆಲ್ಲುತ್ತೇನೆ. ನಾನು ನನ್ನ 22 ನೇ ವಯಸ್ಸಿನಲ್ಲಿ ನಟನೆಗೆ ಇಳಿದಾಗ ದೊಡ್ಡ ಸ್ಟಾರ್ ಆಗಬೇಕು ಎನ್ನುವ ಯಾವ ಆಸೆಯೂ ಇರಲಿಲ್ಲ. ನಟನೆ, ಸಿನಿಮಾದಲ್ಲಿ ಆಸಕ್ತಿ ಇತ್ತು ಅದಕ್ಕಾಗಿ ಇಲ್ಲಿಗೆ ಬಂದೆ. ಯಾರೇ ಆದರೂ ಅಷ್ಟೇ, ದೊಡ್ಡದಾಗಿ ಏನಾದರೂ ಮಾಡುತ್ತೇವೆ ಎಂದು ಹೊರಡುವ ಕ್ಷೇತ್ರದಲ್ಲಿ ಮೊದಲಿಗೆ ನಮಗೆ ಆಸಕ್ತಿ ಇರಬೇಕು. ಆಗಲೇ ಗೆಲುವು ಸಾಧ್ಯ’ ಎಂದು ಯಶಸ್ಸಿನ ಕೀಲಿ ಕೈ ಯಾವುದು ಎಂದು ತೆರೆದಿಟ್ಟಿದ್ದಾರೆ ಕರೀನಾ.  

loader