ಇದೀಗ ಮೊದಲ ಬಾರಿಗೆ ಮೌನವನ್ನು ಮುರಿದು, ನನಗೆ ದೇಶ ಮೊದಲು. ನಮ್ಮ ಸೇನೆಯ ಬಗ್ಗೆ, ಸೈನಿಕರ ಬಗ್ಗೆ ಗೌರವವಿದೆ. ಭಯೋತ್ಪಾದನೆಯನ್ನು ಖಂಡಿಸುತ್ತೇನೆ. ಇನ್ನು ಮುಂದೆ ಪಾಕ್ ನಟರ ಜೊತೆ ಕೆಲಸ ಮಾಡುವುದಿಲ್ಲ ಎಂದು ಜೋಹರ್ ಹೇಳಿದ್ದಾರೆ.

ಮುಂಬೈ (ಅ.18): ಯೇ ದಿಲ್ ಹೇ ಮುಷ್ಕಿಲ್ ಚಿತ್ರ ವಿವಾದವನ್ನು ಸೃಷ್ಟಿ ಮಾಡಿದ್ದು ನಿರ್ದೇಶಕ ಕರಣ್ ಜೋಹರ್ ಮೌನ ಮುರಿದು ಮೊದಲ ಬಾರಿಗೆ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಚಿತ್ರದಲ್ಲಿ ಪಾಕ್ ನಟ ಫಾವದ್ ಖಾನ್ ನಟಿಸಿದ್ದರಿಂದ ಚಿತ್ರವನ್ನು ನಿಷೇಧಿಸುವಂತೆ ಎಂಎನ್ ಎಸ್ ಕರೆ ನೀಡಿತ್ತು. ಆದರೆ ಈ ಬಗ್ಗೆ ಕರಣ್ ಜೋಹರ್ ತುಟಿಕ್ ಪಿಟಿಕ್ ಅಂದಿರಲಿಲ್ಲ.

ಇದೀಗ ಮೊದಲ ಬಾರಿಗೆ ಮೌನವನ್ನು ಮುರಿದು, ನನಗೆ ದೇಶ ಮೊದಲು. ನಮ್ಮ ಸೇನೆಯ ಬಗ್ಗೆ, ಸೈನಿಕರ ಬಗ್ಗೆ ಗೌರವವಿದೆ. ಭಯೋತ್ಪಾದನೆಯನ್ನು ಖಂಡಿಸುತ್ತೇನೆ. ಇನ್ನು ಮುಂದೆ ಪಾಕ್ ನಟರ ಜೊತೆ ಕೆಲಸ ಮಾಡುವುದಿಲ್ಲ ಎಂದು ಜೋಹರ್ ಹೇಳಿದ್ದಾರೆ.