ರಶ್ಮಿಕಾ ಮಂದಣ್ಣ ‘ಡಿಯರ್ ಕಾಮ್ರೆಡ್’ ರಿಲೀಸ್ ಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ರಶ್ಮಿಕಾ - ದೇವರಕೊಂಡ ಕಿಸ್ಸಿಂಗ್ ಸೀನ್ ಗಳು ಚರ್ಚೆಗೊಳಗಾಗಿದೆ. ಜೊತೆಗೆ ರಶ್ಮಿಕಾ ನನಗೆ ‘ಕನ್ನಡ ಕಷ್ಟ’ ಎಂದು ಹೇಳಿಕೆ ನೀಡಿದ್ದು ವಿವಾದವನ್ನು ಹುಟ್ಟು ಹಾಕಿದೆ. ರಶ್ಮಿಕಾ ರನ್ನು ಸ್ಯಾಂಡಲ್ ವುಡ್ ನಿಂದ ಬ್ಯಾನ್ ಮಾಡಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ. 

ಏತನ್ಮಧ್ಯೆ ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ‘ಡಿಯರ್ ಕಾಮ್ರೆಡ್’ ನಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಟನೆಯನ್ನು ಶ್ಲಾಘಿಸಿದ್ದಾರೆ.  ಸ್ಟನ್ನಿಂಗ್ ಹಾಗೂ ಪವರ್ ಫುಲ್ ಲವ್ ಸ್ಟೋರಿ! ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ನಟನೆ ಕೂಡಾ ಅದ್ಭುತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಹಿಂದಿಗೂ ಕೂಡಾ ಡಿಯರ್ ಕಾಮ್ರೆಡನ್ನು ರಿಮೇಕ್ ಮಾಡುವುದಾಗಿ ಹೇಳಿದ್ದಾರೆ.