ಕಪಿಲ್ ಶರ್ಮಾ ಅವರು ದಿ ಕಪಿಲ್ ಶರ್ಮಾ ಶೋ ಜೊತೆಗೆ ಅವರ ಮುಂದಿನ ಚಿತ್ರ 'ಫೈರಂಗಿ'ಯಲ್ಲಿ ಬಿಡುವಿಲ್ಲದೆ ಅಭಿನಯಿಸುತ್ತಿರುವ ಕಾರಣ ತುಂಬ ಆಯಾಸಗೊಂಡ ಕಾರಣ ಸೆಟ್'ನಲ್ಲಿಯೇ ಕುಸಿದು ಬಿದ್ದಿದ್ದಾರೆ.

ಮುಂಬೈ(ಜು.08): ಹಿಂದಿಯ ಕಿರುತರೆ ಮಾಧ್ಯಮದ ಖ್ಯಾತ ಹಾಸ್ಯ ನಿರೂಪಕ ಕಪಿಲ್ ಶರ್ಮಾ ಅತಿಯಾದ ಆಯಾಸದಿಂದ ಸೆಟ್'ನಲ್ಲಿಯೇ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಪಿಲ್ ಶರ್ಮಾ ಅವರು ದಿ ಕಪಿಲ್ ಶರ್ಮಾ ಶೋ ಜೊತೆಗೆ ಅವರ ಮುಂದಿನ ಚಿತ್ರ 'ಫೈರಂಗಿ'ಯಲ್ಲಿ ಬಿಡುವಿಲ್ಲದೆ ಅಭಿನಯಿಸುತ್ತಿರುವ ಕಾರಣ ತುಂಬ ಆಯಾಸಗೊಂಡ ಕಾರಣ ಸೆಟ್'ನಲ್ಲಿಯೇ ಕುಸಿದು ಬಿದ್ದಿದ್ದಾರೆ. ತಮ್ಮ ಶೋ ಕಾರ್ಯಕ್ರಮಕ್ಕೆ 'ಜಬ್ ಹ್ಯಾರಿ ಮೀಟ್ ಸೆಜಲ್' ಚಿತ್ರದ ನಾಯಕ ಶಾರೂಕ್ ಖಾನ್ ಹಾಗೂ ನಿರ್ದೇಶಕ ಇಮ್ತಿಯಾಕ್ ಅಲಿ ಭಾಗವಹಿಸಬೇಕಿತ್ತು. ಅವರು ಬರುವ ಕೆಲವು ಸಮಯದ ಮುನ್ನವೇ ಕುಸಿದು ಬಿದ್ದಿದ್ದಾರೆ.

ಈ ಚಿತ್ರ ಆಗಸ್ಟ್ 4 ರಂದು ಬಿಡುಗಡೆಯಾಗಲಿದೆ. ಅವರು ಕೆಲವು ದಿನಗಳ ಹಿಂದಷ್ಟೆ ಅತಿ ರಕ್ತದೊತ್ತಡದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇತ್ತೀಚಿಗಷ್ಟೆ ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಹಾಸ್ಯನಟ ಸುನೀಲ್ ಗ್ರೋವರ್ ಮೇಲೆ ಹಲ್ಲೆ ಮಾಡಿ ವಿವಾದಕ್ಕೀಡಾಗಿದ್ದರು.