ಬೆಂಗಳೂರು[ಜ. 20]  ನಟಿ ರಮ್ಯಾ ಮೇಲೆ ಕನ್ನಡಿಗರು ಕೆಂಡ ಕಾರಿದ್ದಾರೆ. ಹಾಗಾದರೆ ಕನ್ನಡಿ್ಗರ ಆಕ್ರೋಶಕ್ಕೆ ರಮ್ಯಾ ಕಾರಣವಾಗಿದ್ದು ಯಾಕೆ ಇಲ್ಲಿದೆ ಉತ್ತರ.

ಕನ್ನಡ ಚಿತ್ರರಂಗದಲ್ಲಿಯೇ ಹೆಸರು ಮಾಡಿ, ಕನ್ನಡಿಗರಿಂದಲೇ ಸಂಸದೆಯೂ ಆಗಿದ್ದ ರಮ್ಯಾ ಇದೀಗ ಮಾಡಿರುವ ಟ್ವೀಟ್ ವಿವಾದ ಎಬ್ಬಿಸಿದೆ.  ದರ್ಶನ್, ಸುದೀಪ್, ಯಶ್ ರನ್ನು ಮರೆತಿರುವ ರಮ್ಯಾ ಧನುಷ್ ಗೆ ಜೈ ಎಂದಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ನಡಿಯಕ್ಕಾಗ್ತಿಲ್ಲ ಅಂತಿದ್ದ ರಮ್ಯಾ ದುಬೈನಲ್ಲಿ? 

ತಮಿಳು ನಟ ಧನುಷ್ ಅಭಿನಯದ 'ಮಾರಿ 2' ಸಿನಿಮಾದ 'ರೌಡಿ ಬೇಬಿ..' ಹಾಡು ಇದೀಗ ಯೂ ಟ್ಯೂಬ್ ನಲ್ಲಿ 100 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಈ ಸಿನಿಮಾದ ಹಾಡಿಗೆ ನಟಿ ರಮ್ಯಾ ಟ್ವಿಟ್ಟರ್ ನಲ್ಲಿ ಶುಭ ಕೋರಿದ್ದಾರೆ. ''ಎಂತಹ ಹಾಡು ಡಿ!, ಹಾಡು 100 ಮಿಲಿಯನ್ ಆಗಿದೆ ಎಂದು ಹೊಗಳಿಕೆಯನ್ನು ಹಾಕಿದ್ದಾರೆ.

ಇದನ್ನು ಕಂಡ ಕನ್ನಡಿಗರು ಕೆಂಡಾಮಂಡಲವಾಗಿದ್ದು, ನಿಮಗೆ ಕೆಜಿಎಫ್ ಯಶಸ್ಸು ಕಂಡಿಲ್ಲವೇ? ಪೈಲ್ವಾನ್ ಟೀಸರ್ ಕಣ್ಣಿಗೆ ಬಿದ್ದಿಲ್ಲವೇ? ಯಜಮಾನನ ಓಟ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.