ಅಮಿತಾಬ್ ಪಾತ್ರದಲ್ಲಿ ಅನಂತ್ ನಾಗ್; ಬಿಗ್ ಬಿಯನ್ನೂ ಮೀರಿಸಿದ್ದಾರೆ ಅನಂತ್ ನಾಗ್

Kannada Veteran actor Ananth Nag Replaced Amitabh Bachchan in Movie
Highlights

ಈ ಚಿತ್ರದ ನಿರ್ದೇಶಕರು ನರೇಂದ್ರ ಬಾಬು. ಆದರೆ, ಚಿತ್ರದ ಕ್ಲೈಮ್ಯಾಕ್ಸ್ ಬರೆದಿದ್ದು ಮಾತ್ರ ಮತ್ತೊಬ್ಬ ನಿರ್ದೇಶಕ ಹೇಮಂತ್ ರಾವ್. ಕತೆ ಒಬ್ಬರದ್ದು, ಕ್ಲೈಮ್ಯಾಕ್ಸ್  ಮತ್ತೊಬ್ಬ ನಿರ್ದೇಶಕರಿಂದ ಮಾಡಿಸಿಕೊಂಡ ಸಿನಿಮಾ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾ. ಹರೀಶ್ ಶೇರಿಗಾರ್ ಮತ್ತವರ ತಂಡ ಅದ್ದೂರಿಯಾಗಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಅನಂತ್‌ನಾಗ್, ರಾಧಿಕಾ ಚೇತನ್, ಸ್ಮಿತಾ ಕುಲಕರ್ಣಿ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. 

ಈ ಚಿತ್ರದ ನಿರ್ದೇಶಕರು ನರೇಂದ್ರ ಬಾಬು. ಆದರೆ, ಚಿತ್ರದ ಕ್ಲೈಮ್ಯಾಕ್ಸ್ ಬರೆದಿದ್ದು ಮಾತ್ರ ಮತ್ತೊಬ್ಬ ನಿರ್ದೇಶಕ ಹೇಮಂತ್ ರಾವ್. ಕತೆ ಒಬ್ಬರದ್ದು, ಕ್ಲೈಮ್ಯಾಕ್ಸ್  ಮತ್ತೊಬ್ಬ ನಿರ್ದೇಶಕರಿಂದ ಮಾಡಿಸಿಕೊಂಡ ಸಿನಿಮಾ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾ. ಹರೀಶ್ ಶೇರಿಗಾರ್ ಮತ್ತವರ ತಂಡ ಅದ್ದೂರಿಯಾಗಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಅನಂತ್‌ನಾಗ್, ರಾಧಿಕಾ ಚೇತನ್, ಸ್ಮಿತಾ ಕುಲಕರ್ಣಿ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. 

ಇದೇ ವಾರ (ಮೇ.25) ಸಿನಿಮಾ ತೆರೆಗೆ ಬರುತ್ತಿದೆ. ಆದರೆ, ಈ ಚಿತ್ರದ ಕತೆಯನ್ನು ಅನಂತ್ ನಾಗ್ ಅವರಿಗೆ ಹೇಳಿದ ನಿರ್ದೇಶಕ ನರೇಂದ್ರ ಬಾಬು ಅವರು ಕತೆಗೆ ಎಂಥ ಕ್ಲೈಮ್ಯಾಕ್ಸ್ ಬೇಕು? ಎನ್ನುವ ಒದ್ದಾಟದಲ್ಲಿದ್ದರು. ಹೀಗಾಗಿ ಅನಂತ್‌ನಾಗ್ ಕೂಡ ಎರಡು ಕ್ಲೈಮ್ಯಾಕ್ಸ್ ಮಾಡಿಕೊಂಡಿದ್ದರು. ಇತ್ತ ನರೇಂದ್ರ ಬಾಬು ಕೂಡ ಎರಡು ಕ್ಲೈಮ್ಯಾಕ್ಸ್ ರೆಡಿ ಮಾಡಿಕೊಂಡಿದ್ದರು. ಆದರೆ, ಅನಂತ್‌ನಾಗ್ ಅವರಿಗೆ ನಾಲ್ಕು ಕ್ಲೈಮ್ಯಾಕ್ಸ್‌ಗಳು ಅಷ್ಟಾಗಿ ಹಿಡಿಸಲಿಲ್ಲ. ಈ ನಡುವೆ ನಿರ್ದೇಶಕ ಹೇಮಂತ್ ರಾವ್ ಅವರು ‘ಕವಲುದಾರಿ’ ಚಿತ್ರದ  ಕೆಲಸದ ಭಾಗವಾಗಿ ಅನಂತ್‌ನಾಗ್ ಅವರ ಮನೆಗೆ ಹೋಗಿದ್ದರು.

ಆಗಲೇ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ಕತೆ ಬಗ್ಗೆ ಚರ್ಚೆ ಮಾಡಿ, ಇದಕ್ಕೊಂದು ಕ್ಲೈಮ್ಯಾಕ್ಸ್ ಬೇಕು ಎಂದು ಕೇಳಿದ್ದು ಅನಂತ್‌ನಾಗ್. ‘ಹೇಮಂತ್ ರಾವ್ ಇಡೀ ಕತೆಯನ್ನು ಓದಿದರು. ಅವರಿಗೂ ಯಾವ ಕ್ಲೈಮ್ಯಾಕ್ಸ್ ಕೂಡ ಹೊಳೆಯಲಿಲ್ಲ. ಆದರೆ, ಇನ್ನೇನು ಮನೆಯಿಂದ ಹೊರಡಬೇಕು ಎನ್ನುವಾಗ ಒಂದು ಹೊಸ ರೀತಿಯ ಕ್ಲೈಮ್ಯಾಕ್ಸ್ ಕೊಟ್ಟರು. ನಮ್ಮ ಇಡೀ ತಂಡಕ್ಕೆ ಅದು ಹಿಡಿಸಿತು. ಹೊಸ ರೀತಿಯಲ್ಲಿದೆ. ನಾಲ್ಕು ಕ್ಲೈಮ್ಯಾಕ್ಸ್‌ಗಳನ್ನು ಮುಂದಿಟ್ಟುಕೊಂಡು ಕೂತವರಿಗೆ ಹೊಸದೊಂದು ತಿರುವು ಸಿಕ್ಕಂತಾಯಿತು. ಕ್ಲೈಮ್ಯಾಕ್ಸ್ ಸಿಕ್ಕ ಮೇಲೆ ನಾನೇ ಚಿತ್ರಕ್ಕೆ ಹೆಸರು ಸೂಚಿಸಿದೆ’ ಎಂದು ಚಿತ್ರದ ಕ್ಲೈಮ್ಯಾಕ್ಸ್ ಕತೆ ಹೇಳಿಕೊಂಡರು ಹಿರಿಯ ನಟ ಅನಂತ್ ನಾಗ್.

ಅಮಿತಾಭ್ ಬಚ್ಚನ್ ಮಾಡಬೇಕಿದ್ದ ಪಾತ್ರ: ಅಂದಹಾಗೆ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದಲ್ಲಿ ಅನಂತ್‌ನಾಗ್ ಮಾಡಿರುವ ಪಾತ್ರವನ್ನು ಬಾಲಿವುಡ್‌ನ ಬಿಗ್‌ಬಿ ಅಮಿತ್‌ಭ್ ಬಚ್ಚನ್  ಅವರಿಂದ ಮಾಡಿಸಬೇಕೆಂಬ ಆಸೆಯಲ್ಲಿದ್ದರಂತೆ ನಿರ್ದೇಶಕ ನರೇಂದ್ರ ಬಾಬು. ಈ ವಿಷಯವನ್ನು ಅನಂತ್‌ನಾಗ್ ಅವರ ಮುಂದೆಯೇ ಹೇಳಿಕೊಂಡಿದ್ದು ಸ್ವತಃ  ನರೇಂದ್ರ ಬಾಬು ಅವರೇ. ‘ಇದೊಂದು ಕಾರ್ಪೋರೆಟ್ ಜಗತ್ತಿನ ಕತೆ. ಈ ಕತೆಯನ್ನು ಪ್ರೇಕ್ಷಕರಿಗೆ ದೊಡ್ಡ ಮಟ್ಟದಲ್ಲಿ ತಲುಪಿಸಬೇಕೆಂದು ಯೋಚಿಸಿದಾಗ ಅನಂತ್‌ನಾಗ್ ಮಾಡಿರುವ ಪಾತ್ರವನ್ನು  ಅಮಿತಾಭ್ ಅವರಿಂದ ಮಾಡಿಸುವ ಯೋಚನೆ ಬಂದು. ಅದೇ ಸಮಯಕ್ಕೆ ‘ಸಂತೆಯಲ್ಲಿ ನಿಂತ ಕಬೀರ’ ಸಿನಿಮಾದಲ್ಲಿ ಅನಂತ್ ಸಾರ್ ಜತೆಗೆ ಕೆಲಸ ಮಾಡುವಾಗ ಬಿಗ್‌ಬಿ ಯಾಕೆ? ಅನಂತ್‌ನಾಗ್ ಅವರೇ ಇದ್ದಾರಲ್ಲ ಎಂದು ಯೋಚಿಸಿ ಪಾತ್ರ, ಕತೆ ಹೇಳಿ ಅನಂತ್‌ನಾಗ್ ಅವರನ್ನು ಒಪ್ಪಿಸಿಕೊಂಡೆ’ ಎಂದು ನರೇಂದ್ರ ಬಾಬು ಚಿತ್ರದ ಬಿಡುಗಡೆ ಪತ್ರಿಕಾಗೋಷ್ಟಿಯಲ್ಲಿ ಹೇಳಿಕೊಂಡರು.  

loader