ಎಂಗೇಜ್‌ಮೆಂಟ್ ಆಗಿದ್ರೂ ರಕ್ಷಿತ್ ಶೆಟ್ಟಿ ಪ್ರೇಮ ಪತ್ರ ಬರೆದ್ರು!

Kannada Star Rakshit Shetty celebrates his Engagement anniversary
Highlights

ನಟ ರಕ್ಷಿತ್ ಶೆಟ್ಟಿ ಪ್ರೇಮ ಪತ್ರವೊಂದನ್ನು ಬರೆದಿದ್ದಾರೆ. ಅರೇ ಇದೇನು ರಕ್ಷಿತ್ ಮತ್ತು ರಶ್ಮಿಕಾ ಮಂದಣ್ಣ ಎಂಗೇಜ್ ಮೆಂಟ್ ಮಾಡಿಕೊಂಡು ವರ್ಷವಾಯಿತಲ್ಲಾ? ಇದೀಗ ಯಾರಿಗೆ ಪ್ರೇಮ ಪತ್ರ ಬರೆಯುತ್ತಿದ್ದಾರೆ ಎಂದು ಯೋಚನೆ ಮಾಡ್ತಾ ಇದ್ದೀರಾ? ಅದೆಲ್ಲದಕ್ಕೆ ಉತ್ತರ ಇಲ್ಲಿದೆ.

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದಲ್ಲಿ ಇಡೀ ಕರ್ನಾಟಕದ ಮನ ಗೆದ್ದಿದ್ದರು. ಜತೆಗೆ ತಮ್ಮ ಮನಸ್ಸನ್ನು ಪರಸ್ಪರ ಎಕ್ಸ್ ಚೆಂಜ್ ಮಾಡಿಕೊಂಡಿದ್ದರು. ಅದಾದ ಮೇಲೆ ಜೋಡಿ ಎಂಗೇಜ್ ಮೆಂಟ್ ಮಾಡಿಕೊಂಡಿತ್ತು. ಹೌದು ರಕ್ಷಿತ್ ಮತ್ತು ರಶ್ಮಿಕಾ ಎಂಗೇಜ್ ಮೆಂಟ್ ಆಗಿ ಇಂದಿಗೆ ಒಂದು ವರ್ಷವಾಗಿದ್ದು ಅದನ್ನು ಸಂಭ್ರಮಿಸಿರುವ ಶೆಟ್ಟರು ಸೋಶಿಯಲ್ ಮೀಡಿಯಾದಲ್ಲಿ ೊಲವಿನ ಗೆಳತಿಯೊಂದಿಗೆ ಕಳೆದ ಕ್ಷಣಗಳ ಮೆಲುಕು ಹಾಕಿದ್ದಾರೆ.

ನಾನು ನಿನ್ನೊಂದಿಗೆ ಇದ್ದಷ್ಟು ಹೊತ್ತು ಹೊಸ ವಿಚಾರಗಳನ್ನು ಕಲಿಯುತ್ತೇನೆ. ಅವರ್ ಫಸ್ಟ್ ಇಯರ್ ಟು ಗೆದರ್ ಎಂದು ರಶ್ಮಿಕಾರೊಂದಿಗೆ ಇರುವ ಫೋಟೋಗಳ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ.

ರಕ್ಷಿತ್ ಶೆಟ್ಟಿ ಅವರು 'ಅವನೇ ಶ್ರೀಮನ್ನಾರಾಯಣ' ಹಾಗೂ '777 ಚಾರ್ಲಿ' ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ.  ರಶ್ಮಿಕಾ ಮಂದಣ್ಣ ಮೂರು ತೆಲುಗು ಹಾಗೂ ಒಂದು ಕನ್ನಡ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ಜತೆಗೆ ಯಜಮಾನ ಚಿತ್ರದಲ್ಲೂ ನಟಿಸುತ್ತಿದ್ದಾರೆ.

 

loader