'ಜೋಡಿಹಕ್ಕಿ'ಯಿಂದ ಹೊರಬಂದ ಜಾನಕಿ | ಕೆಲವೇ ದಿನಗಳಲ್ಲಿ ಧಾರಾವಾಹಿ ಮುಕ್ತಾಯ | 

ಕಿರುತೆರೆ ಜನಪ್ರಿಯ ಧಾರಾವಾಹಿ ‘ಜೋಡಿಹಕ್ಕಿ’ ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ ಎಂದರೆ ತಪ್ಪಾಗಲಿಕ್ಕಿಲ್ಲ. ಜಾನಕಿ ಟೀಚರ್, ಪೈಲ್ವಾನ್ ರಾಮಣ್ಣ ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. 

ಜೋಡಿಹಕ್ಕಿ ತಂಡದಿಂದ ಸಪ್ರೈಸ್ ನ್ಯೂಸೊಂದು ಹೊರ ಬಿದ್ದಿದೆ. ಜಾನಕಿ ಟೀಚರ್ ಹೊರ ಬಂದಿದ್ದಾರೆ. ಟೀಚರ್ ಆಗಿದ್ದ ಜಾನಕಿ ಪತಿಯ ಸಪೋರ್ಟ್ ನಿಂದ ಕಷ್ಟಪಟ್ಟು ಓದಿ ಐಎಎಸ್ ಅಧಿಕಾರಿಯಾಗಿದ್ದಾರೆ. ಕಥೆ ಅನೇಕ ತಿರುವುಗಳನ್ನು ಪಡೆಯುತ್ತಾ ಚೆನ್ನಾಗಿ ಮೂಡಿ ಬರುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಮುಕ್ತಾಯದ ಹಂತ ತಲುಪಿದೆ. ಸುಮಾರು ಎರಡು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ್ದ ಜೋಡಿಹಕ್ಕಿ ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. 

ಜಾನಕಿ ಪಾತ್ರಧಾರಿ ನಟಿ ಚೈತ್ರಾ ರಾವ್ ಈ ಬಗ್ಗೆ ಅಧಿಕೃತಗೊಳಿಸಿದ್ದಾರೆ.

View post on Instagram

"2017 ರಲ್ಲಿ ಶುರುವಾದ ಜೋಡಿಹಕ್ಕಿ ಮುಕ್ತಾಯಗೊಳ್ಳಲಿದೆ. ಇದೊಂದು ಮರೆಯಲಾಗದ ಜರ್ನಿ ಆಗಿತ್ತು. ಚಾನೆಲ್ ನವರಿಗೆ, ಪ್ರೊಡಕ್ಷನ್ ಹೌಸ್ ನವರಿಗೆ ಧನ್ಯವಾದಗಳು" ಎಂದಿದ್ದಾರೆ.