ಬೆಂಗಳೂರು (ಸೆ. 22): ಮನೆಮಂದಿಯೆಲ್ಲರ ಅಚ್ಚುಮೆಚ್ಚಿನ ಧಾರಾವಾಹಿ ’ಅಗ್ನಿಸಾಕ್ಷಿ’ 1250 ಎಪಿಸೋಡ್ ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇಷ್ಟು ಎಪಿಸೋಡ್ ಗಳಾದರೂ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ. ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 

ಮೈಸೂರು ಮಂಜು ಈ ಧಾರಾವಾಹಿಯ ನಿರ್ದೇಶಕರು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ರಾತ್ರಿ 8 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗುತ್ತದೆ. 

ಸನ್ನಿಧಿ, ಸಿದ್ಧಾರ್ಥ್ ಜೋಡಿ ಮೋಡಿ ಮಾಡಿದೆ. ಇವರಿಬ್ಬರ ಜಗಳ, ರೊಮ್ಯಾನ್ಸ್ ಎಲ್ಲರಿಗೂ ಇಷ್ಟವಾಗುತ್ತದೆ. ಇನ್ನೂ ಹೆಚ್ಚಿನ ಎಪಿಸೋಡ್ ಗಳನ್ನು ಪೂರೈಸುವ ಉತ್ಸಾಹದಲ್ಲಿದೆ ಧಾರಾವಾಹಿ ತಂಡ. ಅನೇಕ ಟ್ವಿಸ್ಟ್ ಗಳನ್ನು ಪಡೆಯಲಿದೆ ಈ ಧಾರಾವಾಹಿ.