ಗೋವಾದಲ್ಲಿ ಕಿಸ್ ನಂತರ ಊಟಿಗೆ ಪಯಣ !
ನಿರ್ದೇಶಕ ಎಪಿ ಅರ್ಜುನ್ ಅವರ ‘ಕಿಸ್’ ಚಿತ್ರ ಗೋವಾದಲ್ಲಿ ಸದ್ದು ಮಾಡಿ ಬಂದಿದೆ. ‘ಅಂಬಾರಿ’ ಖ್ಯಾತಿಯ ಅರ್ಜುನ್ ನಿರ್ದೇಶನದ ಚಿತ್ರವಿದು. ಈ ಚಿತ್ರದ ಮೂಲಕ ವಿರಾಟ್ ಹಾಗೂ ಶ್ರೀಲೀಲಾ ಎಂಬುವವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ ನಿರ್ದೇಶಕರು.
ಇದು ಒಂದು ರೊಮ್ಯಾಟಿಕ್ ಸಿನಿಮಾ. ಈಗಾಗಲೇ ಗೋವಾದಲ್ಲಿ ಚಿತ್ರೀಕರಿಸಿಕೊಳ್ಳಲಾದ ದೃಶ್ಯಗಳ ಸ್ಟಿಲ್ಸ್ ನೋಡಿದರೆ ಸಿನಿಮಾ ತುಂಬಾ ಹಾಟ್ ಆಗಿದೆ ಎನ್ನುವ ಭಾವನೆ ಬರದೇ ಇರದು. ಗೋವಾದಷ್ಟೇ ಬೆಚ್ಚಗಿಡುವ ನಾಯಕ, ನಾಯಕಿಯ ಮೈಮಾಟ ಇಲ್ಲಿದೆ. ಮಳೆ ಬರುವ ಮುನ್ನವೇ ಗೋವಾ ಶೆಡ್ಯೂಲ್ ಚಿತ್ರೀಕರಣ ಮುಗಿಸಿರುವ ಎ ಪಿ ಅರ್ಜುನ್, 10 ದಿನದ ಚಿತ್ರೀಕರಣದಲ್ಲಿ 3 ದಿನ ಫೈಟ್, 7 ದಿನ ಟಾಕಿ ದೃಶ್ಯಗಳನ್ನು ಚಿತ್ರೀಕರಣ ಮಾಡಿಕೊಂಡಿದ್ದಾರೆ. ಒಟ್ಟು 40 ದಿನದಲ್ಲಿ ಶೇ.70 ಭಾಗದಷ್ಟು ಚಿತ್ರೀಕರಣ ಮುಗಿದಿದೆ. ‘ನನ್ನ ನಿರೀಕ್ಷೆಯಂತೆ ಸಿನಿಮಾ ಚೆನ್ನಾಗಿ ಬರುತ್ತಿದೆ.
ವಿರಾಟ್ ಹಾಗೂ ಶ್ರೀಲೀಲಾ ಹೊಸಬರು. ಆದರೂ ಚೆನ್ನಾಗಿ ನಟಿಸುತ್ತಿದ್ದಾರೆ. ಗೋವಾದ ಬೀಚು, ನಗರದೊಳಗೆ ಚಿತ್ರೀಕರಣ ಮಾಡಿದ್ದೇವೆ. ಸೆಖೆ ಇತ್ತಾದರೂ ಗೋವಾ ಚಿತ್ರೀಕರಣ ಸುಸೂತ್ರವಾಗಿ ನಡೀತು. ಮುಂದೆ ಊಟಿಯಲ್ಲಿ ಚಿತ್ರೀಕರಣ’ ಎನ್ನುತ್ತಾರೆ ನಿರ್ದೇಶಕ ಅರ್ಜುನ್.
ವಿ ರವಿಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಶೆಟ್ಟಿ ಕ್ಯಾಮೆರಾ, ಹರಿಕೃಷ್ಣ ಸಂಗೀತ ಇದೆ. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ. ‘ಕಿಸ್’ ಅಂದಾಕ್ಷಣ ತೀರಾ ರೋಮಾಂಚಗೊಳ್ಳುವಂಥ ದ್ದೇನಿಲ್ಲ. ಇಲ್ಲಿ ಕಿಸ್ ಅಂದರೆ ಲವ್ ಎಂದರ್ಥ. ಕಿಸ್ ಡಿಮ್ಯಾಂಡ್ ಫಾರ್ ಲವ್ ಎನ್ನುವ ಥೀಮು ಚಿತ್ರದ್ದು. ಮೈಸೂರಿನ ಹುಡುಗ ವಿರಾಟ್, ಬೆಂಗಳೂರಿನ ಹುಡುಗಿ ಶ್ರೀಲೀಲಾ. ಇಬ್ಬರೂ ಕಾಲೇಜು ಓದುತ್ತಿದ್ದಾರೆ. ಮೈಸೂರಿನ ಹುಡುಗ ಮತ್ತು ಬೆಂಗಳೂರಿನ ಹುಡುಗನ ನಡುವಿನ ಕಿಸ್ ಲವ್ ಸ್ಟೋರಿ ಇದು. ?
(ಕನ್ನಡಪ್ರಭ ವಾರ್ತೆ)
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos
