ಅಕ್ಟೋಬರ್‌ನಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಹೊಟ್ಟೆಯುರಿ, ಸಿಟ್ಟು, ಕಣ್ಣು ಕೆಂಪಾಗುವುದು ಮುಂತಾದವುಗಳನ್ನು ಬಿಗ್‌ಬಾಸ್ ಸಿಂಪ್ಟಮ್ಸ್ ಎಂದು ಕರೆಯುತ್ತಾರೆ ಅನ್ನುವ ಚುರುಕಾದ ಪ್ರೋಮೋವನ್ನು ನೀವು ನೋಡಿರುತ್ತೀರಿ. ಬಿಗ್‌ಬಾಸ್ ಈ ಸಲ ಮೈಕೊಡವಿಕೊಂಡು ಎದ್ದು ನಿಲ್ಲಲು ನಿರ್ಧರಿಸಿದೆ ಅನ್ನುವ ಸೂಚನೆ ಕಾಣಿಸುತ್ತಿದೆ. ಕಳೆದ ವರ್ಷ ಶ್ರೀಸಾಮಾನ್ಯರನ್ನಷ್ಟೇ ಮನೆಗೆ ಬಿಟ್ಟುಕೊಂಡು ಕೊಂಚ ತೊಂದರೆ ಅನುಭವಿಸಿದ ಬಿಗ್‌ಬಾಸ್ ಈ ಬಾರಿ ಸೆಲೆಬ್ರಿಟಿಗಳನ್ನಷ್ಟೇ ಮನೆಗೆ ಸೇರಿಸಲು ತೀರ್ಮಾನಿಸಿದೆಯಂತೆ.

ಬಿಗ್ ಬಾಸ್ ಮನೆ ಎಂಟ್ರಿ ಲೆಟೆಸ್ಟ್ ಲಿಸ್ಟ್, ಹನುಮಂತನ ಜತೆ ಟಿಕ್ ಟಾಕ್ ಶೂರರು!

ಈ ಸಲದ ಬಿಗ್‌ಬಾಸ್ ಮನೆಯ ಸದಸ್ಯರ ಪಟ್ಟಿ ಜೋರಾಗಿಯೇ ಇದೆ. ಪತ್ರಕರ್ತ, ಕಾದಂಬರಿಕಾರ ರವಿ ಬೆಳಗೆರೆ ಬಿಗ್‌ಬಾಸ್ ಮನೆಯಲ್ಲಿ ವಾಸ ಮಾಡಲು ನಿರ್ಧರಿಸಿದ್ದಾರೆ. ಅವರೊಂದಿಗೆ ಶ್ರೀನಗರ ಕಿಟ್ಟಿ, ಕುರಿ ಪ್ರತಾಪ್, ಜಿಗರ್‌ಥಂಡಾ ನಟ ರಾಹುಲ್, ದುನಿಯಾ ರಶ್ಮಿ, ಕುರಿ ಪ್ರತಾಪ್, ಜನಪ್ರಿಯ ಜನಪದ ಗಾಯಕ ಹನುಮಂತಪ್ಪ , ಒಂದಿಬ್ಬರು ಕಿರುತೆರೆ ನಟಿಯರು, ಹಿರಿಯ ನಟಿ ವಿಜಯಲಕ್ಷ್ಮಿ, ರಾಗಿಣಿ- ಹೀಗೆ ಮತ್ತೊಂದಷ್ಟು ಹೆಸರುಗಳ ಪಟ್ಟಿ ಬಿಗ್‌ಬಾಸ್ ಅಭಿಮಾನಿಗಳ ವಾಟ್ಸಾಪ್ ಗ್ರೂಪುಗಳಲ್ಲಿ ಓಡಾಡುತ್ತಿವೆ.

ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್​: ನಿವೇದಿತಾ-ಚಂದನ್ ಶೆಟ್ಟಿಗೆ ಸಂಕಷ್ಟ

ಈ ಪೈಕಿ ರವಿ ಬೆಳಗೆರೆ ಬಿಗ್‌ಬಾಗ್ ಮನೆಗೆ ಕಾಲಿಡುವುದು ಖಾತ್ರಿಯಾಗಿದೆ ಎನ್ನುವುದು ಮಾತ್ರ ಖಾತ್ರಿಯಾಗಿದೆ. ಫೈರ್ ಬ್ರಾಂಡ್ ಪತ್ರಕರ್ತ, ಪ್ರಚಂಡ ವಾಗ್ಮಿ ಮತ್ತು ಸೃಜನಶೀಲ ಲೇಖಕ ರವಿ ಬೆಳಗೆರೆ ಪ್ರವೇಶದೊಂದಿಗೆ ಬಿಗ್ ಬಾಸ್ ಮನೆಗೆ ಹೊಸದೊಂದು ರಂಗು ಬರುವುದಂತೂ ಖಾತ್ರಿ.

ಬಿಗ್ ಬಾಸ್ ಮನೆ ಎಂಟ್ರಿ ಲೆಟೆಸ್ಟ್ ಲಿಸ್ಟ್, ಹನುಮಂತನ ಜತೆ ಟಿಕ್ ಟಾಕ್ ಶೂರರು!

ಎರಡು ವರ್ಷಗಳ ಹಿಂದೆ ಬಿಗ್‌ಬಾಸ್ ಮನೆಯಲ್ಲಿ ರವಿ ಬೆಳಗೆರೆ ಮಗಳು ಭಾವನಾ ಸದಸ್ಯೆಯಾಗಿದ್ದರು. ಇದೀಗ ಅಲ್ಲಿಗೆ ರವಿ ಬೆಳಗೆರೆ ಹೋಗುತ್ತಿದ್ದಾರೆ. ಯಾರನ್ನು ಬೇಕಿದ್ದರೂ ಶತ್ರುವನ್ನಾಗಿ ಮಾಡಿಕೊಳ್ಳಬಲ್ಲ, ಮಿತ್ರರನ್ನಾಗಿ ಮಾಡಿಕೊಳ್ಳಬಲ್ಲವರು ಎಂದೇ ಹೆಸರಾಗಿರುವ ರವಿ ಬೆಳಗೆರೆ ಬಿಗ್‌ಬಾಸ್ ಮನೆಯೊಳಗೆ ಏನು ಮಾಡುತ್ತಾರೆ ಅನ್ನುವ ಕುತೂಹಲವಂತೂ ಹುರಿಗಟ್ಟಿದೆ.
ಈ ವಾರಾಂತ್ಯದ ಹೊತ್ತಿಗೆ ನಾಟಕ ಶುರುವಾಗಲಿದೆ. ಪ್ರತಿದಿನ 9 ಗಂಟೆಗೆ.