ನವೀನ್‌ ಸಜ್ಜು ಹಾಗೂ ಮೇಘನಾ ರಾಜ್‌ ಕಂಠದಲ್ಲಿ ಮೂಡಿಬಂದಿರುವ ಹಾಡು ಈಗ ಗಮನ ಸೆಳೆಯುತ್ತಿದೆ. ಈ ಚಿತ್ರದ ಟ್ರೇಲರ್‌ ಕಳೆದ ವಾರವಷ್ಟೇ ಬಿಡುಗಡೆಯಾಗಿತ್ತು. ಮೊದಲಿಗೆ ‘ಶ್ಯಾನೆ ಟಾಪ್‌ ಆಗವ್ಳೆ’ ಲಿರಿಕಲ್‌ ವೀಡಿಯೋಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು, 7 ಲಕ್ಷಕ್ಕೂ ಅಧಿಕ ಮಂದಿ ಈ ಹಾಡಿಗೆ ಟಿಕ್‌ಟಾಕ್‌ ವೀಡಿಯೋ ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿ 75 ಲಕ್ಷಕ್ಕೂ ಅಧಿಕ ಹಿಟ್ಸ್‌ ಪಡೆದುಕೊಂಡು ದಾಖಲೆ ಮಾಡಿದೆ. ಈಗ ‘ವಾಟ್‌ ಎ ಬ್ಯೂಟಿಫುಲ್‌ ಹುಡುಗಿ’ ಹಾಡಿನ ಸರದಿ. ಈಗಷ್ಟೆಬಿಡುಗಡೆಯಾಗಿರುವ ಈ ಹಾಡು ಲಕ್ಷ ಹಿಟ್ಸ್‌ ಗಡಿ ದಾಟಿದೆ.

ಬಜಾರ್ ಹುಡುಗಿಗೆ ಸಿಕ್ತು ‘ಬ್ರಹ್ಮಚಾರಿ’ಗಳಿಂದ ಸಾಥ್!

ಉದಯ್‌ ಕೆ ಮೆಹ್ತಾ ನಿರ್ಮಾಣದ, ವಿಜಯ್‌ ಕಿರಣ್‌ ನಿರ್ದೇಶನದ ಈ ಚಿತ್ರವನ್ನು ಜುಲೈ 19ರಂದು ದೊಡ್ಡ ಮಟ್ಟದಲ್ಲಿ ತೆರೆಗೆ ತರಲಾಗುತ್ತಿದೆ. ಹಾಡುಗಳೇ 90 ಲಕ್ಷ ಹಿಟ್ಸ್‌ ಪಡೆದುಕೊಳ್ಳುತ್ತವೆ ಎಂಬುದು ಚಿತ್ರತಂಡದ ನಂಬಿಕೆ. ಇಲ್ಲಿ ಚಿರಂಜೀ ಸರ್ಜಾ ಅವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ರವಿಶಂಕರ್‌, ತಾರಾ, ಶಿವರಾಜ್‌ ಕೆ.ಆರ್‌ ಪೇಟೆ, ಅರುಣಾ ಬಾಲರಾಜ್‌, ರಂಜಿತಾ ಮುಖ್ಯ ಪಾತ್ರಗಳಲ್ಲಿ ಇದ್ದಾರೆ.