ಆರೋಪಿಯು ನಟಿಗೆ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದು, ಚಾರಿತ್ರ್ಯದ ಬಗ್ಗೆ ಪ್ರಶ್ನೆ ಮಾಡಿ ಸಂದೇಶ ಕಳುಹಿಸಿದ್ದ ಎಂದು ದೂರು ದಾಖಲಾಗಿದೆ.
ಬೆಂಗಳೂರು(ಡಿ.30): ನಗರದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ತನಗೆ ರಾಜ್'ಶೇಖರ್ ಎಂಬ ಪೋಷಕ ನಟ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ 'ಐಸ್ ಮಹಲ್' ಸಿನಿಮಾ ನಟಿ ಆರೋಪ ಮಾಡಿದ್ದಾರೆ.
ಪ್ರಕರಣ ಸಂಬಂಧ ಮಾಗಡಿ ರೋಡ್ ಪೊಲೀಸರು ದೂರು ದಾಖಲಿಸಿ ರಾಜಶೇಖರ್'ನನ್ನು ಬಂಧಿಸಿದ್ದಾರೆ. ಆರೋಪಿಯು ನಟಿಗೆ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದು, ಚಾರಿತ್ರ್ಯದ ಬಗ್ಗೆ ಪ್ರಶ್ನೆ ಮಾಡಿ ಸಂದೇಶ ಕಳುಹಿಸಿದ್ದ ಎಂದು ದೂರು ದಾಖಲಾಗಿದೆ.
