ನಟಿ ಕಾಜಲ್ ಅಗರ್‌ವಾಲ್ ಮೇಕಪ್ಪಿಲ್ಲದ ಫೋಟೋ ರಿವೀಲ್ | ಬ್ಯೂಟಿಗಿಂತ ಆಂತರಿಕ ಸೌಂದರ್ಯವೇ ಮೇಲು ಎಂದಿದ್ದಾರೆ | 

ನಟಿ ಕಾಜಲ್ ಅಗರ್ ವಾಲ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಇರುವ ನಟಿ. ಯಾವಾಗಲೂ ಮೇಕಪ್ಪಿನಲ್ಲಿ ಚಂದ ಚಂದ ಫೋಟೋಗಳನ್ನು ಹಾಕುವುದನ್ನು ನೋಡಿದ್ದೇವೆ. ಇದೀಗ ಇನ್ಸ್ಟಾಗ್ರಾಮ್ ನಲ್ಲಿ ಮೇಕಪ್ ಇಲ್ಲದ ಫೋಟೋವೊಂದನ್ನು ಹಾಕಿದ್ದಾರೆ. ಇದು ಅವರ ನಿಜವಾದ ಬಣ್ಣ ಹೇಗಿದೆ ಎಂದು ತೋರಿಸುವುದಕ್ಕಲ್ಲ. ಬದಲಾಗಿ ಬ್ಯೂಟಿಗಿಂತ ಮನಸ್ಸು ಮುಖ್ಯ ಎಂದು ಹೇಳಲು ಮೇಕಪ್ಪಿಲ್ಲದ ಫೋಟೋ ಹಾಕಿದ್ದಾರೆ. 

View post on Instagram

" ಮೇಕಪ್ ಇಲ್ಲದ ಸಾಧಾಸೀದಾ ಫೋಟೋ ಹಾಕಿ, ನಾವು ಮಾಯಾ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಇಲ್ಲಿ ಬಾಹ್ಯ ಸೌಂದರ್ಯಕ್ಕೆ ಬೆಲೆ ಜಾಸ್ತಿ. ಸೌಂದರ್ಯಕ್ಕಾಗಿ, ಬ್ಯೂಟಿಗಾಗಿ ಲಕ್ಷಗಟ್ಟಲೇ ಹಣವನ್ನು ಸುರಿಯುತ್ತೇವೆ. ನಾವಲ್ಲದ್ದನ್ನು ಹೌದು ಎಂದು ತೋರಿಸುವುದಕ್ಕಿಂತ ನಾವಿರುವಂತೆಯೇ ಒಪ್ಪಿಕೊಳ್ಳುವುದೇ ನಿಜವಾದ ಸೌಂದರ್ಯ. ಮೇಕಪ್ ನಮ್ಮನ್ನು ಹೊರಗಿನಿಂದ ಚಂದ ಕಾಣುವಂತೆ ಮಾಡುತ್ತದೆ. ಆದರೆ ನಮ್ಮ ವ್ಯಕ್ತಿತ್ವವನ್ನು, ನಾವ್ಯಾರು ಎಂಬುದನ್ನು ಅರ್ಥೆಸುತ್ತದೆಯಾ"? ಎಂದು ಬರೆದುಕೊಂಡಿದ್ದಾರೆ. 

View post on Instagram