ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಳ ಚಿತ್ರದ ಟ್ರೈಲರ್ ರಿಲೀಸ್

Kaala Trailer: Watch Rajinikanth as Saviour of the Masses
Highlights

ಕಾಳ ಚಿತ್ರದ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಬರೆಯುವತ್ತ ದಾಪುಗಾಲಿಟ್ಟಿದೆ. ಬಿಡುಗಡೆಯಾದ ಕೆಲವೇ ಕ್ಷಣಗಲ್ಲಿ 3 ಲಕ್ಷಕ್ಕೂ ಅಧಿಕ ಜನ ಟ್ರೈಲರ್ ವೀಕ್ಷಣೆ ಮಾಡಿದ್ದು, ಹಿಂದಿನ ಕಬಾಲಿ ಚಿತ್ರದ ದಾಖಲೆ ಮುರಿಯಲು ಸಜ್ಜಾಗಿದೆ.
 

ಬೆಂಗಳೂರು(ಮೇ 29): ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಕಾಳ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ರಜನಿಕಾಂತ್ ಜೊತೆಗೆ ಬಾಲಿವುಡ್ ನಟ ನಾನಾ ಪಾಟೇಕರ್, ಹುಮಾ ಖುರೇಶಿ ಸೇರಿದಂತೆ ಹಲವು ತಾರಗಣಗಳನ್ನ ಹೊಂದಿರುವ ಈ ಚಿತ್ರ ಅಭಿಮಾನಿಗಳ ನಿರೀಕ್ಷೆಯನ್ನ ಇಮ್ಮಡಿಗೊಳಿಸಿದೆ. ಟ್ರೈಲರ್ ಬಿಡುಗಡೆಯಾದ ಕೆಲವೇ ಕ್ಷಣಗಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಟ್ರೈಲರ್ ವೀಕ್ಷಿಸಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ರಜನಿಕಾಂತ್ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. 

ಹಿಂದುಳಿದ ವರ್ಗದ ನಾಯಕನಾಗಿ ಕಾಣಿಸಿಕೊಂಡಿರುವ ರಜನಿಕಾಂತ್‌ಗೆ ಈ ಚಿತ್ರ ಹೊಸ ತಿರುವು ನೀಡಲಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಈಗಾಗಲೇ ರಾಜಕೀಯಕ್ಕೆ ಲಗ್ಗೆ ಇಟ್ಟಿರುವ ರಜನಿಕಾಂತ್‌ ಭವಿಷ್ಯಕ್ಕೂ ಈ ಚಿತ್ರ ಸಹಕಾರಿಯಾಗಲಿದೆ. ಪಾ.ರಂಜಿತ್ ನಿರ್ದೇಶನದ ಒಂದೂವರೆ ನಿಮಿಷದ ಕಾಳ ಚಿತ್ರದ ಟ್ರೈಲರ್ ಅಭಿಮಾನಿಗಳ ಮನಸ್ಸು ಗೆದ್ದಿದೆ. ಜೂನ್ 7 ರಂದು ದೇಶ ವಿದೇಶಗಳಲ್ಲಿ ಕಾಳ ಚಿತ್ರ ಬಿಡುಗಡೆಯಾಗಲಿದೆ. 

loader