ಮುಂಬೈ(ಜ.18): ಕಾಡ್ಗಿಚ್ಚಿಗೆ ಸಿಕ್ಕು ನಲುಗಿರುವ ಆಸ್ಟ್ರೆಲೀಯಾಗೆ ಬಾಲಿವುಡ್ ನಟಿ ಜುಹಿ ಚಾವ್ಲಾ ಪುತ್ರ ಅರ್ಜುನ್ 28 ಸಾವಿರ ರೂ. ದೇಣಿಗೆ ನೀಡಿದ್ದಾರೆ.

ಇಂಗ್ಲೆಂಡ್’ನಲ್ಲಿ ಓದುತ್ತಿರುವ 16 ವರ್ಷ ಪ್ರಾಯದ ಜುಹಿ ಚಾವ್ಲಾ ಪುತ್ರ ಅರ್ಜುನ್, ತಮ್ಮ ಪಾಕೆಟ್ ಮನಿಯಿಂದಲೇ 300 ಪೌಂಡ್ಸ್(28 ಸಾವಿರ ರೂ.) ದೇಣಿಗೆ ನೀಡಿರುವುದು ವಿಶೇಷ.

ಜೂಹಿ ಚಾವ್ಲಾ'ಪ್ರೇಮಲೋಕ'ದ ಹೀರೋ ಇವರೇ; ಇಂಟರೆಸ್ಟಿಂಗ್ ಲವ್ ಕಹಾನಿ!

ಈ ಕುರಿತು ಮಾಹಿತಿ ನೀಡಿರುವ ಜುಹಿ ಚಾವ್ಲಾ, ತಮ್ಮ ಮಗನ ಕಾರ್ಯವನ್ನು ಶ್ಲಾಘಿಸುವುದಾಗಿ ಹೇಳಿದ್ದಾರೆ. ಆಸಿಸ್ ಜನರ ನೋವನ್ನು ಅರ್ಥ ಮಾಡಿಕೊಂಡ ಅರ್ಜುನ್ ನಿಜಕ್ಕೂ ಒಳ್ಳೆಯ ಹೃದಯ ಹೊಂದಿದ್ದಾನೆ ಎಂದು ಜುಹಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಗುರು ಅವರ ‘ಕಾವೇರಿ ಕಾಲಿಂಗ್’ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಜುಹಿ, ಪ್ರಕೃತಿ ವಿನಾಶ ಎಂತಹ ಭೀಕರ ಪರಿಣಾಮ ಬೀರಬಲ್ಲದು ಎಂಬುದಕ್ಕೆ ಆಸ್ಟ್ರೆಲೀಯಾದ ಕಾಡ್ಗಿಚ್ಚು ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ.