ಚಿತ್ರದ ಒಂದು ಫೈಟ್ ಹಾಗೂ ಮತ್ತೊಂದು ಚೇಸಿಂಗ್ ಸನ್ನಿ ವೇಶಕ್ಕೆ ಜಾಲಿ ಬಾಸ್ಟಿನ್ ಸಾಹಸ ನಿರ್ದೇಶನ ಮಾಡುತ್ತಿ ದ್ದಾರೆ. ಜುಲೈ 17ರಿಂದ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಅದ್ದೂರಿಯಾಗಿ ಚಿತ್ರೀಕರಣ ನಡೆಯಲಿದೆ.

ಸಲಗ ಸೆಟ್‌ನಲ್ಲಿ ಸೂರಿ - ವಿಜಿ ನಡುವೆ ಎನಾಯ್ತು?

ಹಾಲಿ ವುಡ್ ಮಾದರಿ ಯಲ್ಲಿ ಆ್ಯಕ್ಷನ್ ಸನ್ನಿ ವೇಶಗಳನ್ನು ಚಿತ್ರಕ್ಕೆ ನಿರ್ದೇಶಿಸಿ ಕೊಡುವುದಾಗಿ ಬಾಸ್ಟಿನ್ ಭರವಸೆ ನೀಡಿದ್ದಾಗಿ ಚಿತ್ರತಂಡ ಹೇಳುತ್ತಿದೆ. ‘ಚಿತ್ರದಲ್ಲಿ ಒಟ್ಟು ಐದು ಆ್ಯಕ್ಷನ್ ಸನ್ನಿವೇಶಗಳಿವೆ. ಈ ಪೈಕಿ ಚಿತ್ರದ ಹೈಲೈಟ್ ಎಂದೇ ಪರಿಗಣಿಸಬಹುದಾದ ಒಂದು ಫೈಟ್ ಮತ್ತು ಚೇಸಿಂಗ್ ಸನ್ನಿವೇಶವನ್ನು ಅದ್ದೂರಿ ಯಾಗಿ ಚಿತ್ರೀ ಕರಿಸಬೇಕೆಂದು ಯೋಚಿ ಸಿದಾಗ ನಮಗೆ ಹೊಳೆ ದಿದ್ದು ಜಾಲಿ ಬಾಸ್ಟಿನ್ ಹೆಸರು. ಅಂದುಕೊಂಡಂತೆ ಅವರು ಹಾಲಿವುಡ್ ಮಾದರಿಯಲ್ಲೇ ಆ್ಯಕ್ಷನ್ ಸನ್ನಿವೇಶಗಳನ್ನು ತೆರೆಗೆ ತರುವುದಾಗಿ ಭರವಸೆ ನೀಡಿದ್ದಾರೆ. ಅವರು ಒಪ್ಪಿಕೊಂಡು ಬಂದಿರುವುದು ಖುಷಿ ತಂದಿದೆ’ ಎನ್ನುತ್ತಾರೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್.

‘ಸಲಗ’ ಮುಹೂರ್ತದಲ್ಲಿ ಸಿದ್ದು ಒಂಟಿಸಲಗಾನ ನೆನಪಿಸಿಕೊಂಡಿದ್ದೇಕೆ ?