ಮೊನ್ನೆ ಮೊನ್ನೆ ತಾಯಿ ಶ್ರೀದೇವಿಯ ಕಾಂಜೀವರಂ ಸೀರೆಯುಟ್ಟು ತಾಯಿಯ ಪರವಾಗಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿ ಸುದ್ದಿಯಾದವಳು ಜಾನ್ವಿ ಕಪೂರ್. ಡಿಟ್ಟೋ ತನ್ನ ತಾಯಿ ಥರಾನೇ ಕಾಣ್ತಾಳೆ ಅನ್ನೋದು ಆಕೆಗೆ ಸಿಗುತ್ತಿರೋ ಕ್ರೆಡಿಟ್. ಸದ್ಯಕ್ಕೆ ಶಶಾಂಕ್ ಕೈತಾನ್ ನಿರ್ದೇಶನದ ‘ಧಡಕ್’ ಸಿನಿಮಾದಲ್ಲಿ ಬ್ಯುಸಿಯಾಗಿರುವ ಜಾನ್ವಿ ಡಯೆಟ್,  ವರ್ಕೌಟ್ ಬಗ್ಗೆ ಒಂದಿಷ್ಟು ಡೀಟೆಲ್ಸ್.

ಏನ್ ಡಯೆಟ್ ಮಾಡ್ತಾರೆ?
ಟ್ರಾವೆಲ್, ಮ್ಯೂಸಿಕ್ ಬಿಟ್ರೆ ತನ್ನ ಸ್ನೇಹಿತರು ಇಷ್ಟೇ ಜಗತ್ತು ಅಂದ್ಕೊಂಡಿರೋ  ಹುಡುಗಿ ಸಿನಿಮಾ ಕ್ಷೇತ್ರಕ್ಕೆ ಬಂದ್ಮೇಲೆ ಒಂಚೂರು ಬದಲಾಗಿದ್ದಾಳೆ. ಫಿಟ್‌ನೆಸ್ ಕಡೆಗೆ ಗಮನ ಹೆಚ್ಚಾಗಿದೆ. ಎದ್ದ ಕೂಡಲೇ 4 ಗ್ಲಾಸ್ ನೀರು ಕುಡಿಯುವ 19 ರ ಹರೆಯದ ಈ ಹುಡುಗಿ, ಬ್ರೌನ್ ಬ್ರೆಡ್, ಪೀನಟ್ ಕ್ರೀಮ್, ಎಗ್‌ವೈಟ್‌ನಲ್ಲಿ ಉಪಾಹಾರ ಮುಗಿಸ್ತಾರೆ.  ಮಧ್ಯಾಹ್ನಕ್ಕೆ ಕೆಂಪಕ್ಕಿ ಅನ್ನ, ತರಕಾರಿ ಮತ್ತು ಬಹಳ ಇಷ್ಟಪಡೋ ಚಿಕನ್ ಸ್ಯಾಂಡ್‌ವಿಚ್ ಇರುತ್ತೆ. ಸಂಜೆ ಹಣ್ಣು ತಿನ್ನೋದಿಷ್ಟ. ತರಕಾರಿ, ಸೂಪ್‌ಗಳಲ್ಲೇ ಡಿನ್ನರ್ ಮುಗಿಯುತ್ತೆ. 

ಜಿಮ್ ಫ್ರೀಕ್ ಅಲ್ಲ
ಫಿಟ್‌ನೆಸ್‌ಗೋಸ್ಕರ ವರ್ಕೌಟ್ ಪ್ಲಾನ್ ಮಾಡಿಕೊಂಡಿರುವ ಜಾನ್ವಿ ವಾರದಲ್ಲಿ ನಾಲ್ಕು ದಿನ ಜಿಮ್‌ನಲ್ಲಿ ವರ್ಕೌಟ್ ಮಾಡ್ತಾರೆ. ಹಾಗಂತ ಜಿಮ್ ಫ್ರೀಕ್ ಏನಲ್ಲ. ಕಾರ್ಡಿಯೋ ಎಕ್ಸರ್‌ಸೈಸ್, ವೈಟ್ ಲಿಫ್ಟಿಂಗ್ ಮಾಡೋದು ರೂಢಿ. ವಾರದಲ್ಲಿ 1 ದಿನ ಈಜು ಹೊಡೀತಾರೆ. ಮತ್ತೊಂದು ದಿನ ಬಹಳ ದೂರಕ್ಕೆ ಜಾಗಿಂಗ್ ಮಾಡುತ್ತಾರೆ. ಈಗಷ್ಟೆ ಟೀನೇಜ್ ದಾಟಿರುವ ಕಾರಣ ಸಹಜವಾಗಿಯೇ ಫಿಟ್‌ನೆಸ್ ಇರುತ್ತೆ. ಈ ಬಗ್ಗೆ ಹೆಚ್ಚು  ತಲೆಕೆಡಿಸ್ಕೊಳ್ಳೋದು ಬೇಡ ಅಂತಾರಂತೆ ಆಕೆಯ ಟ್ರೈನರ್.