ಹೇಗಿದೆ ಗೊತ್ತಾ ’ಜಾನಿ ಜಾನಿ ಎಸ್ ಪಾಪಾ’ ಬಾಕ್ಸಾಫೀಸ್ ಕಲೆಕ್ಷನ್?

Jaani Jaani S Paapa Kannada Movie Collection
Highlights

ಕಳೆದ ವಾರ ಸಾಕಷ್ಟು ಸಿನಿಮಾಗಳು ಬಿಡುಡೆಯಾಗಿದ್ರೂ  ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದು, ದುನಿಯಾ ವಿಜಯ್  ’ಜಾನಿ ಜಾನಿ ಯೆಸ್ ಪಾಪ, ರಾಮ್ ಚರಣ್ ’ರಂಗಸ್ಥಳಂ’ ಹಾಗೂ ಟೈಗರ್ ಶ್ರಾಫ್’ರ ’ಬಾಘಿ 2’  ಸಿನಿಮಾಗಳು. 

ಬೆಂಗಳೂರು (ಏ. 01): ಕಳೆದ ವಾರ ಸಾಕಷ್ಟು ಸಿನಿಮಾಗಳು ಬಿಡುಡೆಯಾಗಿದ್ರೂ  ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದು, ದುನಿಯಾ ವಿಜಯ್  ’ಜಾನಿ ಜಾನಿ ಯೆಸ್ ಪಾಪ, ರಾಮ್ ಚರಣ್ ’ರಂಗಸ್ಥಳಂ’ ಹಾಗೂ ಟೈಗರ್ ಶ್ರಾಫ್’ರ ’ಬಾಘಿ 2’  ಸಿನಿಮಾಗಳು. 

ದುನಿಯಾ ವಿಜಯ್ ಅಭಿನಯದ ನಿರ್ಮಾಣದ ಜಾನಿ ಜಾನಿ ಯೆಸ್ ಸಿನಿಮಾ ಕಳೆದ ಶುಕ್ರವಾರ ರಾಜ್ಯಾದ್ಯಂತ ತೆರೆಕಂಡಿದ್ದು, ಸಿನಿಪ್ರೇಕ್ಷಕರಿದ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಸದ್ಯ ದುನಿಯಾ ಟಾಕಿಸ್ ನಲ್ಲಿ ನಿರ್ಮಾಣವಾಗಿರೋ ಈ ಚಿತ್ರಕ್ಕೆ ಪ್ರಿತಮ್ ಗುಬ್ಬಿ ಆಕ್ಷನ್ ಕಟ್ ಹೇಳಿದ್ದು, ಹೊಸ ಪದ್ಮಾವತಿ ರಚಿತಾ ರಾಮ್ ದುನಿಯಾ ವಿಜಯ್ ಸಾಥ್ ಕೊಟ್ಟಿದ್ದಾರೆ.  ಇನ್ನು ದುನಿಯಾ ವಿಜಯ್ ಮತ್ತು ರಂಗಾಯಣ ರಘು ಕಾಮಿಡಿ ಸಿಕ್ಕಾಪಟ್ಟೆ  ವರ್ಕೌಟ್ ಆಗಿದ್ದು, ಸಿಕ್ಕಾಪಟ್ಟೆ ಮನರಂಜನೆ ಕೊಡುವುದರ ಜತೆಗೆ  ಭರ್ಜರಿ ಕಲೆಕ್ಷನ್ ಮಾಡುತ್ತಿದೆ. 

ಟಾಲಿವುಡ್’ನಲ್ಲಿ  ರಾಮ್ ಚರಣ್ ಮತ್ತು ಸಮಂತಾ ಅಭಿನಯದ ರಂಗಸ್ಥಳಂ ಸಿನಿಮಾ ಕೂಡ ಇದೇ ಶುಕ್ರವಾರ ತೆರೆಕಂಡಿದ್ದು, ಸಿನಿಮಾ ಎಲ್ಲೆಡೆ ಸೂಪರ್ ರೆಸ್ಪಾನ್ಸ್ ಪಡೆದುಕೊಂಡಿದೆ.  ಮೊದಲ ದಿನವೇ ಚಿತ್ರ ಚೆನೈ ನಲ್ಲಿ 25 ಲಕ್ಷ, ಸೇರಿದಂತೆ ತೆಲಗು ತಮಿಳು ಭಾಷೆಯಲ್ಲಿ ಸಿನಿಮಾ 92 ಲಕ್ಷ ಕಲೆಕ್ಷನ್ ಮಾಡಿದೆ. ಇನ್ನು ಈ ಸಿನಿಮಾ ವರ್ಲ್ ವೈಡ್ 40 ಕೋಟಿ ಕಲೆಕ್ಷನ್ ಮಾಡಿದ್ದು, 2 ದಿನಕ್ಕೆ ಸರಿಸುಮಾರು 50 ಕೋಟಿ ಮೀರಿಸಿದ್ದು,  ಯಶಸ್ವಿ  ಪ್ರದರ್ಶನ ಕಾಣುತ್ತಾ  ಮುನ್ನುಗುತ್ತಿದೆ. ಹಳ್ಳಿ  ಸೊಗಡಿನ ವಿಭಿನ್ನ ಹೊಸ ಕಥೆಗೆ ಸುಕುಮಾರ್ ನಿರ್ದೇಶನವಿದ್ದು, ರಾಮ್ ಚರಣ್ ಮತ್ತು ಸಮಂತಾ ಆಕ್ಟಿಂಗ್ ಗೆ ಪ್ರೇಕ್ಷಕರು ಕ್ಲಿನ್ ಬೊಲ್ಡ್ ಆಗಿದ್ದಾರೆ. 

ಈ ಎರಡು ಸಿನಿಮಾಗಳ  ಜತೆ ಬಾಲಿವುಡ್ ಟೈಗರ್ ಶ್ರಾಫ್  ಕೂಡ ರೆಸ್ ನಲ್ಲಿದ್ದಾರೆ.  ಭಾಘಿ 2 ನಲ್ಲಿ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿರೋ ಟೈಗರ್ ಸಿನಿಮಾ ಆಕ್ಷನ್  ಖದರ್’ಗೆ ಸಿನಿ ರಸಿಕರು ಫ್ಲಾಟ್ ಆಗಿದ್ದಾರೆ.  ಅಹ್ಮದ್ ಖಾನ್ ನಿರ್ದೇಶನದ ಭಾಘಿ 2 ಮಾರ್ಚ್ 30 ಕ್ಕೆ ವರ್ಲ್ ವೈಡ್ ರಿಲೀಸ್ ಆಗಿದ್ದು, ಫಸ್ಟ್ ಡೇ 25 ಕೋಟಿ ಬಾಚಿದೆ. ಹೈ ಆಕ್ಷನ್ ನಿಂದ ಕೂಡಿರೋ ಭಾಘಿ 2 ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್’ನಲ್ಲಿ  ಧೂಳೆಬ್ಬಿಸುತ್ತಿದೆ.  

loader