ಇರ್ಫಾನ್ ಖಾನ್ ಗೆ ಐಫಾ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ!

Irrfan Khan reacts after bagging Best Actor honour at IIFA Awards for Hindi Medium PTI
Highlights

ಇರ್ಫಾನ್ ಖಾನ್ ಗೆ ಅತ್ಯುತ್ತಮ ನಟ ಪ್ರಶಸ್ತಿ

ಪ್ರಶಸ್ತಿ ಪ್ರಕಟಿಸಿದ ಐಫಾ-2018

ಅಭಿಮಾನಿಗಳಿಗೆ ದಣ್ಯವಾದ ಸಲ್ಲಿಸಿದ ಇರ್ಫಾನ್

ಲಂಡನ್(ಜೂ.27): ಬಾಲಿವುಡ್ ನಟ ಇರ್ಫಾನ್ ಖಾನ್ ಕ್ಯಾನ್ಸರ್ ಚಿಕಿತ್ಸೆಗಾಗಿ ಲಂಡನ್ ನಲ್ಲಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಮಧ್ಯೆ ಇರ್ಫಾನ್ ಖಾನ್ ಅವರಿಗೆ ಪ್ರಸಕ್ತ ಐಫಾ-೨೦೧೮ ಅವಾರ್ಡ್ಸ ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

'ಹಿಂದಿ ಮಿಡಿಯಂ' ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಇರ್ಫಾನ್ ಖಾನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಇರ್ಫಾನ್, ಐಫಾ ಮತ್ತು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ಟ್ವಿಟರ್ ನಲ್ಲಿ ಸಂತಸ ಹಂಚಿಕೊಂಡಿರುವ ಇರ್ಪಾನ್, ಜೀವನದ ಪಯಣದಲ್ಲಿ ಸದಾ ಜೊತೆಗಿರುವ ತಮ್ಮ ಅಭಿಮಾನಿಗಳಿಗೆ ಈ ಪ್ರಶಸ್ತಿ ಸಮರ್ಪಿಸುತ್ತಿರುವುದಾಗಿ ತಿಳಿಸಿದ್ದಾರೆ. ಸಾಕೇತ್ ಚೌಧರಿ ನಿರ್ದೇಶನದ 'ಹಿಂದಿ ಮಿಡಿಯಂ' ಚಿತ್ರದಲ್ಲಿ ಪಾಕಿಸ್ತಾನದ ನಟಿ ಸಾಬಾ ಕಮರ್, ಇರ್ಫಾನ್ ಖಾನ್, ದೀಪಕ್ ದೋಬ್ರಿಯಾಲ್ ಮತ್ತಿತರರು ನಟಿಸಿದ್ದರು.

 

loader