ದೀಪಿಕಾ ಕತ್ತಿನಲ್ಲಿದ್ದ ಆರ್ ಕೆ ಟ್ಯಾಟೂ ಮಾಯ!

Interesting news about Deepika Padukone
Highlights

ಕೇನ್ಸ್ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟ್‌ನಲ್ಲಿ ಪಿಂಕ್ ಕಲರ್ ಗೌನ್ ತೊಟ್ಟು, ಹೈಹೀಲ್ಡ್ ಸ್ಲಿಪ್ಪರ್ ಹಾಕಿ ದೀಪಿಕಾ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದೇ ತಡ ಎಲ್ಲರೂ ಆಕೆಯ ಸೌಂದರ್ಯಕ್ಕೆ ಚಪ್ಪಾಳೆ ತಟ್ಟಿದರು. ಹಲವರು ಇದಕ್ಕೂ ಮುಂದೆ ಹೋಗಿ ದೀಪಿಕಾಳ ಹಿಂಬದಿ ಕುತ್ತಿಗೆಯಲ್ಲಿದ್ದ ‘ಆರ್.ಕೆ’ ಟ್ಯಾಟೂ ಎಲ್ಲಿ? ಎಂದು ಪ್ರಶ್ನೆ ಮಾಡಿಕೊಂಡು  ಪೂರ್ವಾಪರ ಕೆದಕಲು ಮುಂದಾದರು.

ಮುಂಬೈ (ಮೇ. 14): ಕೇನ್ಸ್ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟ್‌ನಲ್ಲಿ ಪಿಂಕ್ ಕಲರ್ ಗೌನ್ ತೊಟ್ಟು, ಹೈಹೀಲ್ಡ್ ಸ್ಲಿಪ್ಪರ್ ಹಾಕಿ ದೀಪಿಕಾ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದೇ ತಡ ಎಲ್ಲರೂ ಆಕೆಯ ಸೌಂದರ್ಯಕ್ಕೆ ಚಪ್ಪಾಳೆ ತಟ್ಟಿದರು. ಹಲವರು ಇದಕ್ಕೂ ಮುಂದೆ ಹೋಗಿ ದೀಪಿಕಾಳ ಹಿಂಬದಿ ಕುತ್ತಿಗೆಯಲ್ಲಿದ್ದ ‘ಆರ್.ಕೆ’ ಟ್ಯಾಟೂ ಎಲ್ಲಿ? ಎಂದು ಪ್ರಶ್ನೆ ಮಾಡಿಕೊಂಡು  ಪೂರ್ವಾಪರ ಕೆದಕಲು ಮುಂದಾದರು.

ದೀಪಿಕಾ ಮತ್ತು ರಣಭೀರ್ ಕಪೂರ್ ನಡುವಿನ ನಂಟು ಎಲ್ಲರಿಗೂ ಗೊತ್ತಿರುವಂತದ್ದೇ, ಅವರ ಪ್ರೇಮಕ್ಕೆ ಸಾಕ್ಷಿಯಾಗಿಯೇ ದೀಪಿಕಾ ‘ಆರ್‌ಕೆ’ ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ಆದರೆ ಇದು ಹಾಗೆಯೇ ಉಳಿದಿರಲಿಲ್ಲ. ಎರಡು ಬಾರಿ ಜಾಹೀರಾತು ಮತ್ತು ಒಮ್ಮೆ ರೇಸ್ 2 ಚಿತ್ರಕ್ಕಾಗಿ ಟ್ಯಾಟೂ ರಿಮ್ಯೂ ಮಾಡಿಕೊಂಡು ಅಚ್ಚರಿ ಮೂಡಿಸಿದ್ದರು. ಆಗ ಹೆಚ್ಚಿನವರೆಲ್ಲಾ ದೀಪಿಕಾ ರಣಭೀರ್ ನಡುವೆ ಕಂದಕ ಏರ್ಪಟ್ಟಿದೆ ಎಂದೇ ರೂಮರ್ ಹಬ್ಬಿಸಿದ್ದರು. ಅದೆಲ್ಲವೂ ಮುಗಿದು ಮತ್ತೆ ಈ ಜೋಡಿ ಡೇಟಿಂಗ್ ಶುರು ಮಾಡಿದ್ದೇ ತಡ ಈ ರೂಮರ್‌ಗಳೆಲ್ಲಾ ತೆರೆಗೆ ಸರಿದವು.

ಈಗ ಮತ್ತೆ ಕೇನ್ಸ್‌ನಲ್ಲಿ ಹೆಜ್ಜೆ ಹಾಕುವಾಗ ದೀಪಿಕಾ ಕುತ್ತಿಗೆ ಹಿಂದೆ ಪ್ರೀತಿಯ ಸಂಕೇತವಾದ ಟ್ಯಾಟೂ ಇಲ್ಲದೇ ಇರುವುದು ಮತ್ತೆ ಏನಾಗಿದೆ ಈ ಜೋಡಿಗೆ? ಎನ್ನುವ ಪ್ರಶ್ನೆ ಹುಟ್ಟುಹಾಕಿದೆ. ಅಲ್ಲದೇ ಕೆಲವರು ಫೆಸ್ಟ್‌ಗಾಗಿ ಹೀಗೆ ಟ್ಯಾಟೂ ರಿಮ್ಯೂ ಮಾಡಿಕೊಂಡಿರಬಹುದು ಎಂದು ತಮ್ಮ ವಾದ ಮಂಡಿಸಿದ್ದರು. ಅಂದಹಾಗೆ ದೀಪಿಕಾ ಟ್ಯಾಟೂ ಮಾಯವಾಗಿರುವುದು ಇದು ನಾಲ್ಕನೇ ಬಾರಿ. 

loader