ಲೈಂಗಿಕ ದೌರ್ಜನ್ಯ ಕುರಿತಾಗಿ ದಿನಕ್ಕೊಂದರಂತೆ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತವೆ. ಆದರೆ ಇದೀಗ ಬಾಲಿವುಡ್'ನ ಪ್ರಖ್ಯಾತ ನಟಿ ಇಲಿಯಾನಾ ತನ್ನ ಪ್ರಿಯಕರ ತನಗೆ ನೀಡಿದ ಲೈಂಗಿಕ ಕಿರುಕುಳದ ಕಹಿ ಸತ್ಯವನ್ನು ಟ್ವಿಟರ್ ಮೂಲಕ ಬಿಚ್ಚಿಟ್ಟಿದ್ದಾರೆ
ಮುಂಬೈ(ಫೆ.03): ಲೈಂಗಿಕ ದೌರ್ಜನ್ಯ ಕುರಿತಾಗಿ ದಿನಕ್ಕೊಂದರಂತೆ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತವೆ. ಆದರೆ ಇದೀಗ ಬಾಲಿವುಡ್'ನ ಪ್ರಖ್ಯಾತ ನಟಿ ಇಲಿಯಾನಾ ತನ್ನ ಪ್ರಿಯಕರ ತನಗೆ ನೀಡಿದ ಲೈಂಗಿಕ ಕಿರುಕುಳದ ಕಹಿ ಸತ್ಯವನ್ನು ಟ್ವಿಟರ್ ಮೂಲಕ ಬಿಚ್ಚಿಟ್ಟಿದ್ದಾರೆ.
ನಾನು ಕೂಡಾ ಲೈಂಗಿಕ ದೌರ್ಜನ್ಯದ ಬಲಿಪಶುವಾಗಿದ್ದೆ, ಇದೊಂದು ಆಘಾತಕಾರಿ ಸಂಗತಿ. ಆದರೆ ನಾನೊಬ್ಬ ಅದೃಷ್ಟವಂತಳು, ನನಗೆ ಒಳ್ಳೆಯ ಹೆತ್ತವರು ಸಿಕ್ಕಿದ್ದಾರೆ. ನನ್ನ ಕೆಟ್ಟ ಸಮಯದಲ್ಲಿ ಇವರ ಸ್ಪೂರ್ತಿ ನನಗೆ ದೊರಕಿದ್ದು, ನನ್ನನ್ನು ಮತ್ತಷ್ಟು ಬಲಶಾಲಿಯನ್ನಾಗಿಸಿದೆ ಎಂದಿದ್ದಾರೆ.
Scroll to load tweet…
