ಆದರೆ ಇದೀಗ ಇದೇ ಮೋದಿ ಜಿಎಸ್‌ಟಿಯನ್ನು ಜಾರಿಗೆ ತರುತ್ತಿದ್ದಾರೆ. ಅಷ್ಟಕ್ಕೂ ಅಂದಿನಿಂದ ಇಂದಿನವರೆಗೆ ಜಿಎಸ್‌ಟಿ ಬಗ್ಗೆ ಸಂಕ್ಷಿಪ್ತ ವರದಿ.

ನವದೆಹಲಿ(ಜೂ.30): ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಜಿಎಸ್‌ಟಿ ಇಂದು ,ನಿನ್ನೆಯದಲ್ಲ. ಇದಕ್ಕೆ 30 ವರ್ಷಗಳ ಇತಿಹಾಸವಿದೆ. ಇದನ್ನು ಮೊದ್ಲು ಪ್ರಸ್ತಾಪಿಸಿದ್ದು ಯುಪಿಎ ಸರ್ಕಾರ. ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಇದೇ ಜಿಎಸ್‌ಟಿಯನ್ನು ವಿರೋಧಿಸಿದ್ದರು. ಆದರೆ ಇದೀಗ ಇದೇ ಮೋದಿ ಜಿಎಸ್‌ಟಿಯನ್ನು ಜಾರಿಗೆ ತರುತ್ತಿದ್ದಾರೆ. ಅಷ್ಟಕ್ಕೂ ಅಂದಿನಿಂದ ಇಂದಿನವರೆಗೆ ಜಿಎಸ್‌ಟಿ ಬಗ್ಗೆ ಸಂಕ್ಷಿಪ್ತ ವರದಿ.

1986-17 - ವಿ.ಪಿ. ಸಿಂಗ್

GST ಮೊದಲ ಹಂತ ‘ಮೊಡ್ ವ್ಯಾಟ್’ ಪರಿಚಯಿಸಿದ ವಿತ್ತ ಸಚಿವ ವಿಪಿ ಸಿಂಗ್

============

1991-96 - ಮನಮೋಹನ್ ಸಿಂಗ್

ವಿತ್ತ ಸಚಿವ ಮನಮೋಹನ್ ಸಿಂಗ್ ಸೇವಾ ತೆರಿಗೆ ಪರಿಚಯಿಸಿದವರು

============

2008 - ಮನಮೋಹನ್ ಸಿಂಗ್

ಜಿಎಸ್ ಟಿ ರಚನೆ ಅಂತಿಮ

 ಕೇಂದ್ರ ಮತ್ತು ರಾಜ್ಯಗಳಿಗೆ ಪ್ರತ್ಯೇಕ ಕಾಯ್ದೆ

============

2010 - ಮನಮೋಹನ್ ಸಿಂಗ್

ಜಿಎಸ್ ಟಿ ಬಗ್ಗೆ ಪಿ. ಚಿದಬರಂ ಪ್ರಸ್ತಾಪ

ಜಿಎಸ್‌ಟಿ ಮುಂದೂಡಿದ ವಿತ್ತ ಸಚಿವ ಪ್ರಣಬ್

============

2010 - ಮೋದಿ

ಜಿಎಸ್ ಟಿ ವಿರೋಧಿಸಿ ಬಿಡ್‌ನಿಂದ ಹೊರನಡೆದ ಗುಜರಾತ್ ಸಿಎಂ ಮೋದಿ

============

2011 - ಮನಮೋಹನ್ ಸಿಂಗ್

ಬಿಜೆಪಿ, ಜಿಎಸ್‌ಟಿ ತಡೆಹಿಡಿದಿದೆ ಎಂದು ಆರೋಪಿಸಿದ ಮನಮೋಹನ್ ಸಿಂಗ್

============

2012-13 - ಮನಮೋಹನ್ ಸಿಂಗ್

ಐಟಿ ವಲಯಕ್ಕೆ ಅನ್ವಯಿಸುವ ಜಿಎಸ್ ಟಿ ರಚನೆ ಅಂತಿಮಗೊಳಿಸಿದ ಯುಪಿಎ

============

2014 - ಜೇಟ್ಲಿ

ಪರಿಷ್ಕೃತ ಸಂವಿಧಾನ ತಿದ್ದುಪಡಿ ಮಸೂದೆ ಬಿಲ್ ಪರಿಚಯಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ

============

2014 - ಜೇಟ್ಲಿ

ಲೋಕಸಭೆಯಲ್ಲಿ ಅಂಗೀಕಾರ, ತನ್ನ ಸಲಹೆಗಳನ್ನು ಪರಿಷ್ಕರಿಸುವಂತೆ ಕಾಂಗ್ರೆಸ್ ಪಟ್ಟು

============

2016-17 ಜೇಟ್ಲಿ

GST ಅನುಷ್ಠಾನಕ್ಕೆ ಕೇಂದ್ರಕ್ಕೆ ಎಲ್ಲೆಡೆ ಬೆಂಬಲ. ಜಿಎಸ್‌ಟಿ ಅಂತಿಮ

==========================