ನನಗೆ ರಾಜಕೀಯ ಆಗಿಬರಲ್ಲ; ಸಿನಿಮಾ ಆಸಕ್ತಿ ಹೆಚ್ಚಾಗಿದೆ: ಅಂಬರೀಶ್

entertainment | Wednesday, May 30th, 2018
Suvarna Web Desk
Highlights

ಹಿರಿಯ ನಟ ಅಂಬರೀಶ್ ನಿನ್ನೆ ತಮ್ಮ  66 ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡರು. ಜೆಪಿನಗರದಲ್ಲಿರುವ ಅವರ ನಿವಾಸದಲ್ಲಿ ಬೆಳಗ್ಗೆ ಅಭಿಮಾನಿಗಳ ಸುಮ್ಮುಖದಲ್ಲಿ ಬತ್ ಡೇ  ಕೇಕ್ ಕತ್ತರಿಸಿದರು. ತಮ್ಮ ನೆಚ್ಚಿನ ನಟನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಲು ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು.

ಹಿರಿಯ ನಟ ಅಂಬರೀಶ್ ನಿನ್ನೆ ತಮ್ಮ  66 ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡರು. ಜೆಪಿನಗರದಲ್ಲಿರುವ ಅವರ ನಿವಾಸದಲ್ಲಿ ಬೆಳಗ್ಗೆ ಅಭಿಮಾನಿಗಳ ಸುಮ್ಮುಖದಲ್ಲಿ ಬತ್  ಡೇ ಕೇಕ್ ಕತ್ತರಿಸಿದರು. ತಮ್ಮ ನೆಚ್ಚಿನ ನಟನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಲು ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮುಂಜಾನೆ ಅಂಬರೀಶ್ ನಿವಾಸಕ್ಕೆ ಆಗಮಿಸಿ, ಹುಟ್ಟು ಹಬ್ಬ ಶುಭಾಶಯ ಕೋರಿದರು.ನೆಟ್ಟಿನ ನಟನಿಗೆ ಮೈಸೂರು ಪೇಟ ತೊಡಿಸಿ, ಸನ್ಮಾನಿಸಿದರು.  ಸ್ಯಾಂಡಲ್‌ವುಡ್‌ನ ಹಲವು ನಟ-ನಟಿಯರು ಅಂಬರೀಶ್ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಹೇಳಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅಂಬರೀಶ್, ರಾಜಕಾರಣದಿಂದ ಹೊರಗಿದ್ದು ಆರಾಮಾಗಿದ್ದೀನಿ. ಇದ್ರಲ್ಲೂ ಒಂಥರ ಖುಷಿಯಿದೆ. ನಾನ್ ಬಿಟ್ರು ರಾಜಕಾರಣ ಬಿಡೋಲ್ಲ ಅನ್ನೋದು ನಿಜ, ಆದ್ರೆ ಮೊದಲಿನ ಹಾಗೆ ನಂಗೆ ಅಷ್ಟಾಗಿ ರಾಜಕಾರಣ ಆಗಿಬರೋಲ್ಲ. ಸಿನಿಮಾ ಕಡೆ ಗಮನ ಜಾಸ್ತಿ ಆಗಿದೆ’ ಎಂದರು. ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಕುರಿತು ಮಾತನಾಡಿದರು.

‘ ಇದೊಂದು ಫ್ಯಾಮಿಲಿ ಎಂಟರ್ ಟೈನರ್ ಮೂವೀ. ಚಿತ್ರ ನೋಡಲು ನಾನು ಕೂಡ  ‘ಚಿತ್ರದ ಬಿಡುಗಡೆ ನಮ್ ಕೈಯಲ್ಲಿಲ್ಲ. ನಾನು ಆರ್ಟಿಸ್ಟ್ ಮಾತ್ರ. ನಮ್ ಕೆಲಸ ಏನೋ.. ಅದನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸಿದ್ದೆವು. ಆದ್ರೆ ತಾಂತ್ರಿಕವಾಗಿ ತಡವಾಗಿದೆ. ಆದ್ರೂ ಸಿನಿಮಾ ಚೆನ್ನಾಗಿದೆ. ಜನರಿಗೆ ಇಷ್ಟವಾಗುತ್ತೆ’ ಎಂದರು. 

ರಾಜಕೀಯ ಆಗಿಬರೋಲ್ಲ, ಸಿನಿಮಾ ಆಸಕ್ತಿ ಹೆಚ್ಚಾಗಿದೆ!

ಕಾತರದಿಂದ ಕಾಯುತ್ತಿದ್ದೇನೆ. ಒಂದೊಳ್ಳೆ ತಂಡ, ತುಂಬಾನೆ ಸಂತೋಷದಿಂದ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ’ ಎಂದರು.ಅವರ ಹುಟ್ಟುಹಬ್ಬಕ್ಕೆ ಚಿತ್ರ ತಂಡ ಮೇಕಿಂಗ್ ವಿಡಿಯೋ ಗಿಫ್ಟ್ ನೀಡಿತು. ಬೆಳಗ್ಗೆಯಿಂದಲೇ ಆ ಮೇಕಿಂಗ್ ವಿಡಿಯೋ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸ್ಟಾರ್ ನಟರಾದ ಶಿವರಾಜ್ ಕುಮಾರ್, ದರ್ಶನ್, ಸುದೀಪ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರು ಅಂಬರೀಶ್ ಅವರ ಹುಟ್ಟು ಹಬ್ಬಕ್ಕೆ  ಶುಭಾಶಯ ಕೋರಿದ್ದಾರೆ. ಎಷ್ಟೇ ವರ್ಷಗಳು ಕಳೆದರೂ ಸಹ, ಅದೇ ಹುಮ್ಮಸ್ಸು, ವರ್ಚಸ್ಸು, ಗತ್ತು ಕಾಪಾಡಿಕೊಂಡು ಬಂದಿರುವ ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು ಅಂಬಿ ಅಪ್ಪಾಜಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು’ ಎಂಬುದಾಗಿ ದರ್ಶನ್ ಟ್ವಿಟ್ ಮಾಡಿದ್ದಾರೆ. ಹಾಗೆಯೇ ನಟ ಸುದೀಪ್ ಕೂಡ ‘ ಲವ್ ಯು ಆಲ್ ವೇಸ್ ಮಾಮ, ಹುಟ್ಟು ಹಬ್ಬದ ಶುಭಾಶಯಗಳು’ ಎಂಬುದಾಗಿ ಟ್ವಿಟಿಸಿದ್ದಾರೆ. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್ ಕೂಡ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದ್ದಾರೆ. 

Comments 0
Add Comment

    ಹೇಗಿದೆ ಇಂದು ತೆರೆಕಂಡ "ಅಬ್ಬೆ ತುಮಕೂರ ಸಿದ್ಧಿಪುರುಷ ವಿಶ್ವಾರಾಧ್ಯರು"?

    video | Friday, April 13th, 2018