ರಾಜಸ್ಥಾನದ ಜೋದ್'ಪುರ ಕೋರ್ಟ್'ನಲ್ಲಿ 1998ರಲ್ಲಿ  ಚಿತ್ರೀಕರಣ ನಡೆದ ಸಂದರ್ಭದಲ್ಲಿ ಕೃಷ್ಣಮೃಗಗಳನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 51 ವರ್ಷದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲಾಗಿತ್ತು.  ಈ ಸಂದರ್ಭದಲ್ಲಿ ವಕೀಲರು ಸಲ್ಮಾನ್ ಖಾನ್'ನನ್ನು ಪರಿಚಯದ ಪ್ರಶ್ನೆಗಳನ್ನು ಕೇಳುವಾಗ ನಿನ್ನ ಧರ್ಮ ಯಾವುದೆಂದು ಕೇಳಿದ್ದಾರೆ.

ಜೋದ್'ಪುರ್(ಜ.27): ಜೋದ್'ಪುರ ಕೋರ್ಟ್'ನಲ್ಲಿ ವಕೀಲರು ಪಾಟಿ ಸವಾಲಿನಲ್ಲಿ ಸಲ್ಮಾನ್ ಖಾನ್ ಅವರನ್ನು ನಿನ್ನ ಧರ್ಮ ಯಾವುದೆಂದು ಕೇಳಿದಕ್ಕೆ ಸಲ್ಲು ಕೊಟ್ಟ ಉತ್ತರ ಕೇಳಿ ಕೋರ್ಟ್'ನಲ್ಲಿದ್ದವರು ಒಂದು ಕ್ಷಣ ಸ್ತಬ್ದರಾದರು.

ರಾಜಸ್ಥಾನದ ಜೋದ್'ಪುರ ಕೋರ್ಟ್'ನಲ್ಲಿ 1998ರಲ್ಲಿ ಚಿತ್ರೀಕರಣ ನಡೆದ ಸಂದರ್ಭದಲ್ಲಿ ಕೃಷ್ಣಮೃಗಗಳನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 51 ವರ್ಷದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವಕೀಲರು ಸಲ್ಮಾನ್ ಖಾನ್'ನನ್ನು ಪರಿಚಯದ ಪ್ರಶ್ನೆಗಳನ್ನು ಕೇಳುವಾಗ ನಿನ್ನ ಧರ್ಮ ಯಾವುದೆಂದು ಕೇಳಿದ್ದಾರೆ.

ಆಗ ಸಲ್ಮಾನ್ 'ನನ್ನ ಹೆಸರು ಸಲ್ಮಾನ್ ಖಾನ್ ನಾನೊಬ್ಬ ಭಾರತೀಯ' ಎಂದು ಉತ್ತರ ಕೊಟ್ಟಿದ್ದಾರೆ. ಕೃಷ್ಣಮೃಗಗಳನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಸಲ್ಲೂಗೆ 65 ಪ್ರಶ್ನೆಗಳನ್ನು ಕೇಳಲಾಯಿತು. ನಾನು ಈ ಪ್ರಕರಣದಲ್ಲಿ ನಿರ್ದೋಶಿ, ಕೃಷ್ಣಮೃಗಗಳು ನೈಸರ್ಗಿಕ ಕಾರಣಗಳಿಂದ ಮೃತಪಟ್ಟಿವೆ' ಎಂದು ಉತ್ತರಿಸಿದ್ದಾರೆ.

1998ರ ಸಂದರ್ಭದಲ್ಲಿ 'ಹಮ್ ಸಾತ್ ಸಾತ್ ಹೈ' ಚಿತ್ರೀಕರಣದ ವೇಳೆ ಕೃಷ್ಣಮೃಗಗಳನ್ನು ಭೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಆರೋಪಗಳನ್ನು ಎದುರಿಸುತ್ತಿದ್ದಾರೆ. ಕಳೆದ ವರ್ಷ ರಾಜಸ್ಥಾನ ಹೈಕೋರ್ಟ್ ಚಿಂಕಾರ ಜಿಂಕೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್'ನನ್ನು ಖುಲಾಸೆಗೊಳಿಸಿತ್ತು.