, ರಚನಾಗೆ ಇನ್ಮುಂದೆ ಯಾವ ತೊಂದರೆಯನ್ನೂ ನೀಡೋದಿಲ್ಲ ಅನ್ನೋ ಪ್ರಾಮಿಸ್ ಮಾಡಿದ್ರು. ಇಷ್ಟೇ ಅಲ್ಲ ಇನ್ಮುಂದೆ ಮಾಧ್ಯಮಗಳ ಮುಂದೆ ತಮ್ಮ ಖಾಸಗಿ ವಿಚಾರ ತರಲ್ಲ ಅನ್ನೋ ಮಾತನ್ನೂ ಹೇಳಿದರು.
ಬೆಂಗಳೂರು(ಜೂ.20): ಹುಚ್ಚ ವೆಂಕಟ್ ರಂಪಾಟ ಇವತ್ತು ಪ್ರೆಸ್ಕ್ಲಬ್ಗೆ ಶಿಫ್ಟ್ ಆಗಿತ್ತು. ಫಿನಾಯಿಲ್ ಹುಚ್ಚಾಟದ ಬೆಳವಣಿಗೆ ಕುರಿತು ಉತ್ತರ ನೀಡೋಕೆ ಸುದ್ದಿಗೋಷ್ಠಿ ಕರೆದಿದ್ದ ವೆಂಕಟ್ ಮಾಧ್ಯಮಗಳ ಪ್ರಶ್ನೆಗೆ ತಬ್ಬಿಬ್ಬಾಗಿಬಿಟ್ಟರು. ಒಂದು ಹಂತದಲ್ಲಿ ಗರಂ ಆದ ವೆಂಕಟ್. ಮತ್ತೊಮ್ಮೆ ಗದ್ಗಿತರಾಗಿ ಕಣ್ಣೀರಿಟ್ಟರು.
ಹೀಗೆ ಹೈಡ್ರಾಮವನ್ನೇ ಸೃಷ್ಟಿಸಿದ ನಟ ವೆಂಕಟ್, ರಚನಾಗೆ ಇನ್ಮುಂದೆ ಯಾವ ತೊಂದರೆಯನ್ನೂ ನೀಡೋದಿಲ್ಲ ಅನ್ನೋ ಪ್ರಾಮಿಸ್ ಮಾಡಿದ್ರು. ಇಷ್ಟೇ ಅಲ್ಲ ಇನ್ಮುಂದೆ ಮಾಧ್ಯಮಗಳ ಮುಂದೆ ತಮ್ಮ ಖಾಸಗಿ ವಿಚಾರ ತರಲ್ಲ ಅನ್ನೋ ಮಾತನ್ನೂ ಹೇಳಿದರು.
ಆದರೆ, ತಾವು ಫಿನಾಯಿಲ್ ಕುಡಿದಿಲ್ಲ ಎಂಬ ವೈದ್ಯರ ಹೇಳಿಕೆಯನ್ನು ತಳ್ಳಿಹಾಕಿದ ವೆಂಕಟ್, ಫಿನಾಯಿಲ್ ಮೈಮೇಲೆ ಸುರಿದುಕೊಂಡಿದ್ದನ್ನ ಪತ್ತೆ ಹಚ್ಚೋಕೆ ಆಸ್ಪತ್ರೆಗೆ ಬರಬೇಕಿತ್ತಾ ಎಂದು ವೈದ್ಯರನ್ನೇ ಪ್ರಶ್ನಿಸಿದರು. ಇದೆಲ್ಲ ಬೆಳವಣಿಗೆಗಳ ಬಳಿಕ ಸುವರ್ಣ ನ್ಯೂಸ್ ಸ್ಟೂಡಿಯೋಗೆ ಬಂದು ಕುಳಿತ ವೆಂಕಟ್ಗೆ ಹಲವರು ಬುದ್ಧಿವಾದ ಹೇಳಿದರು. ಬಿಗ್ ಬಾಸ್ ವಿನ್ನರ್ ಪ್ರಥಮ್ ಕೂಡ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಅನ್ನೋ ಕಿವಿ ಮಾತು ಹೇಳಿದರು. ಇನ್ಮೇಲಾದ್ರೂ ವೆಂಕಟ್ ಹುಚ್ಚಾಟ ನಿಲ್ಲುತ್ತಾ, ಕಾದು ನೋಡೋಣ.
