ಬಿಗ್‌ಬಾಸ್ ಮೂಲಕ ಖ್ಯಾತಿ ಪಡೆದ ಕನ್ನಡದ ಸ್ವಘೋಷಿತ ಚಿತ್ರ ನಿರ್ದೇಶಕ ಹುಚ್ಚ ವೆಂಕಟ್ ಸದ್ದುಗದ್ದಲವಿಲ್ಲದೆ ಮಡಿಕೇರಿಯಲ್ಲಿ ಮದುವೆಯಾಗಿ ದ್ದಾರೆ ಎನ್ನಲಾಗಿದೆ. 

ಬೆಂಗಳೂರು: ಬಿಗ್‌ಬಾಸ್ ಮೂಲಕ ಖ್ಯಾತಿ ಪಡೆದ ಕನ್ನಡದ ಸ್ವಘೋಷಿತ ಚಿತ್ರ ನಿರ್ದೇಶಕ ಹುಚ್ಚ ವೆಂಕಟ್ ಸದ್ದುಗದ್ದಲವಿಲ್ಲದೆ ಮಡಿಕೇರಿಯಲ್ಲಿ ಮದುವೆಯಾಗಿ ದ್ದಾರೆ ಎನ್ನಲಾಗಿದೆ. 

ತಾನು ಐಶ್ವರ್ಯಾ ಎಂಬ ಯುವತಿ ಯನ್ನು ಕೆಲ ದಿನಗಳ ಹಿಂದೆ ಮದುವೆಯಾಗಿರುವುದಾಗಿ ಹುಚ್ಚ ವೆಂಕಟ್ ಅವರೇ ಫೇಸ್‌ಬುಕ್‌ನಲ್ಲಿ ಫೋಟೋ ಒಂದನ್ನು ಪ್ರಕಟಿಸಿದ್ದಾರೆ. 

ಇದಕ್ಕೆ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಇನ್ನು ಹುಚ್ಚಾ ವೆಂಕಟ್ ಅವರು ವಿವಾಹವಾದ ಯುವತಿ ಅವರ ಚಿತ್ರವೊಂದರಲ್ಲಿಯೇ ಹೀರೋಯಿನ್ ಆಗಿ ನಟಿಸಿದ್ದವರು ಎನ್ನಲಾಗಿದೆ.