ಕ್ರಿಸ್ಮಸ್‌ ರಜೆ ಇರುವ ಕಾರಣ ಮಕ್ಕಳೊಂದಿಗೆ ಹೊಸ ವರ್ಷ ಆಚರಿಸಲು ಇಬ್ಬರೂ ದುಬೈ ತಲುಪಿದ್ದಾರೆ
2013ರಲ್ಲಿ ಡೈವೋರ್ಸ್ ಬಯಸಿದ್ದ ಸುಸ್ಸೇನ್ . 400 ಕೋಟಿ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಕೋರ್ಟಿನಿಂದ ಹೊರಗೆ ರಾಜಿಯಾಗಿ ಸುಸ್ಸೇನ್ ಬಯಸಿದಷ್ಟೇ ಮೊತ್ತವನ್ನು ಹೃತಿಕ್ ಹೊಂದಿಸಿದ್ದೆಲ್ಲ ಹಳೇಕತೆ. ಇದರ ನಂತರ ಪರಸ್ಪರ ವಿರುದ್ಧ ಧ್ರುವಗಳಿಗೆ ಮುಖಮಾಡಿದ್ದ ಜೋಡಿಯನ್ನೀಗ ಮಕ್ಕಳು ಒಂದು ಮಾಡುತ್ತಿದ್ದಾರೆ. ರೆಹಾನ್ ಮತ್ತು ಹೃಧಾನ್ ಓದುತ್ತಿರುವ ಶಾಲೆಯ ಪೋಷಕರ ಸಭೆಗೂ ಇಬ್ಬರೂ ಹಾಜರಾಗ್ತಿದ್ದಾರೆ. ಮಕ್ಕಳು ಬಯಸಿದ ಬಟ್ಟೆಗಳನ್ನು ಕೊಡಿಸುವುದಕ್ಕಾಗಿಯೇ ಇಬ್ಬರೂ ಶಾಪಿಂಗ್ಗೆ ಹೋಗುತ್ತಿದ್ದಾರೆ. ಕ್ರಿಸ್ಮಸ್ ರಜೆ ಇರುವ ಕಾರಣ ಮಕ್ಕಳೊಂದಿಗೆ ಹೊಸ ವರ್ಷ ಆಚರಿಸಲು ಇಬ್ಬರೂ ದುಬೈ ತಲುಪಿದ್ದಾರೆ. ಹೃತಿಕ್ ನಟಿಸಿರುವ ಕಾಬಿಲ್ ಜನವರಿ 25ರಂದು ತೆರೆಕಾಣುತ್ತಿದ್ದು, ಚಿತ್ರದ ಪ್ರಚಾರದಲ್ಲೂ ಸುಸ್ಸೇನ್ ಭಾಗಿಯಾಗುತ್ತಾರೆ ಎನ್ನಲಾಗಿದೆ.
